ಶನಿವಾರ, ಏಪ್ರಿಲ್ 10, 2021
29 °C

ಆದರ್ಶ ಮೈಗೂಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ:  ನೈತಿಕತೆ ಇಲ್ಲದ ಸಮಾಜ ನಾಶವಾಗುತ್ತದೆ ಎಂಬ ಸತ್ಯ ಸಂದೇಶ ಸಾರುವ ಮಹಾಕಾವ್ಯ ರಾಮಾಯಣದ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ರಂಗ ಕಲಾತಿಲಕ ಪ್ರಶಸ್ತಿ ಪುರಸ್ಕೃತ ಕಲಾವಿದ ಎನ್.ಎಸ್.ಬಸವರಾಜು ಶಿಲ್ಪಾಪುರ ತಿಳಿಸಿದರು.ತಾಲ್ಲೂಕಿನ ಐಯ್ಯಂಡಹಳ್ಳಿಯಲ್ಲಿ ಮುನೇಶ್ವರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಏರ್ಪಡಿಸಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತೀಯ ಪರಂಪರೆ ಪ್ರತಿಬಿಂಬಿಸುವ ರಾಮಾಯಣ ಮಹಾಕಾವ್ಯದಲ್ಲಿ ಬರುವ ಶ್ರೀರಾಮಚಂದ್ರ ಪ್ರಭುವಿನ ಆಡಳಿತದ ಕಲ್ಯಾಣ ಗುಣಗಳನ್ನು ನಮ್ಮ ರಾಜಕಾರಣಿಗಳು ಅಳವಡಿಸಿಕೊಂಡರೆ ಮತ್ತೊಮ್ಮೆ ರಾಮರಾಜ್ಯ ಸ್ಥಾಪಿಸಬಹುದು ಎಂದು ತಿಳಿಸಿದರು.ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಮಾತನಾಡಿ, ರಂಗಕಲಾವಿದರು ಕಲಾ ಪ್ರದರ್ಶನದ ಮೂಲಕ ಪುರಾಣ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ನೈತಿಕತೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿದ್ದಾರೆ ಎಂದರು.ಜಿ.ಪಂ.ಸದಸ್ಯ ಎಂ.ಕೆ.ಧನಂಜಯ, ಜಿ.ಪಂ.ಸದಸ್ಯ ಕೆ.ಮುದ್ದುರಾಜಯಾದವ್, ಜಿ.ಪಂ.ಸದಸ್ಯ ವಿಜಯ್‌ಕುಮಾರ್. ತಾ.ಪಂ.ಅಧ್ಯಕ್ಷ ಜಿ.ವಿ.ರಾಮಣ್ಣ, ಭೂ ಬ್ಯಾಂಕ್ ಅಧ್ಯಕ್ಷ ಎಂ.ರಾಮಣ್ಣ, ನಾಟಕದ ವ್ಯವಸ್ಥಾಪಕ ಐ.ಡಿ.ಚಂದ್ರಶೇಖರ್, ಆರ್.ಕೃಷ್ಣಪ್ಪ ಮಾತನಾಡಿದರು.ಹಿರಿಯ ಕಲಾವಿದರಾದ ಜಾಣಗೆರೆ ಭೀಮಣ್ಣ, ಎಚ್.ಆರ್.ಬ್ಯಾಟಪ್ಪ, ರಂಗಸ್ವಾಮಯ್ಯ, ಜಯಶ್ರೀ, ನಂಜುಂಡಪ್ಪ, ನರಸಿಂಹಮೂರ್ತಿ ಇತರರನ್ನು ಸನ್ಮಾನಿಸಲಾಯಿತು. ರಾಮನ ಪಾತ್ರಧಾರಿ ಬಿ.ಪ್ರಸನ್ನ, ಆಂಜನೇಯನ ಪಾತ್ರಧಾರಿ ನಾಗರಾಜಾಚಾರ್, ಸೀತಾ ಪಾತ್ರಧಾರಿ ಹೇಮಾ ಮತ್ತಿತರರು ಮನೋಜ್ಞ ಅಭಿನಯ ನೀಡಿದರು.ಕುಣಿಗಲ್, ಮಾಗಡಿ, ಬೆಂಗಳೂರು ವಿವಿಧೆಡೆಗಳಿಂದ ಹಿರಿಯ ಕಲಾವಿದರನ್ನು ಆಯ್ಕೆ ಮಾಡಿ ಸಂಪೂರ್ಣ ರಾಮಾಯಣ ನಾಟಕಕ್ಕೆ ಪ್ರೋತ್ಸಾಹ ನೀಡಿದ ನಿವೃತ್ತ ಡಿ.ವೈ.ಎಸ್ಪಿ ಡಿ.ರಂಗಸ್ವಾಮಿ, ಎನ್.ಸತೀಶ್ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.