ಆದರ್ಶ ಹಗರಣ: ತನಿಖೆಗೆ ಸಹಕಾರ ಕೋರಿದ ಸಿಬಿಐ

7

ಆದರ್ಶ ಹಗರಣ: ತನಿಖೆಗೆ ಸಹಕಾರ ಕೋರಿದ ಸಿಬಿಐ

Published:
Updated:

ಮುಂಬೈ (ಪಿಟಿಐ): ಆದರ್ಶ ಗೃಹ ನಿರ್ಮಾಣ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮತ್ತು ಇತರ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ತನ್ನ ತನಿಖೆಗೆ ಸಹಕಾರ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ಸಿಬಿಐ ಅಧಿಕಾರಿಗಳ ತಂಡವೊಂದು ಬುಧವಾರ ಇಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಾಕರ ಗಾಯಕವಾಡ್ ಅವರನ್ನು ಭೇಟಿ ಮಾಡಿ ತನಿಖಾ ತಂಡದ ಓಡಾಟಕ್ಕೆ ವಾಹನ ಸೌಲಭ್ಯ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿತು.‘ಕೊಠಡಿ ವ್ಯವಸ್ಥೆ, ಶೀಘ್ರ ಲಿಪಿಕಾರರಂತಹ ಮಾನವಶಕ್ತಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿ ತನಿಖೆಗೆ ಸಹಕರಿಸಲು ನಾವು ವಿನಂತಿಸಿದ್ದೇವೆ. ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆಯನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದ್ದಾರೆ’ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry