ಆದಾಮಿಂದೆ ... ಆಸ್ಕರ್‌ಗೆ ಪ್ರವೇಶ

ಸೋಮವಾರ, ಮೇ 27, 2019
27 °C

ಆದಾಮಿಂದೆ ... ಆಸ್ಕರ್‌ಗೆ ಪ್ರವೇಶ

Published:
Updated:

ಚೆನ್ನೈ, (ಪಿಟಿಐ): ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ಚಿತ್ರ `ಆದಾಮಿಂದೆ ಮಗನ್ ಅಬು~ (ಆದಾಮನ ಮಗ ಅಬು) ಆಸ್ಕರ್ ಪ್ರಶಸ್ತಿಗಾಗಿ ಭಾರತವನ್ನು ಪ್ರತಿನಿಧಿಸಲಿದೆ.ಬಡ ಸುಗಂಧದ್ರವ್ಯ ಮಾರಾಟಗಾರನೊಬ್ಬ ಹಜ್ ಯಾತ್ರೆ ಕೈಗೊಳ್ಳಲು ಬೇಕಾದ ಹಣ ಸಂಗ್ರಹಕ್ಕಾಗಿ ಪಡುವ ಪಡಿಪಾಟಲೇ ಈ ಚಿತ್ರದ ಕಥಾವಸ್ತು. ಸಲೀಂ ಅಹಮದ್ ನಿರ್ದೇಶನದ ಚಿತ್ರದಲ್ಲಿ ಮಲಯಾಳಂ ನಟ ಸಲೀಂ ಕುಮಾರ್ ಮತ್ತು ಜರೀನಾ ವಹಾಬ್ ನಟಿಸಿದ್ದಾರೆ. `ಆಯ್ಕೆಗಾಗಿ ಸ್ಪರ್ಧಾ ಕಣದಲ್ಲಿದ್ದ `ನೋ ಒನ್ ಕಿಲ್ಡ್ ಜೆಸ್ಸಿಕಾ~ ರಜನೀಕಾಂತ್ ಅಭಿನಯದ `ಎಂದಿರನ್~ `ಧೋಬಿ ಘಾಟ್~ ಸೇರಿದಂತೆ 15 ಚಿತ್ರಗಳನ್ನು ಹಿಂದಿಕ್ಕಿ ಈ ಚಿತ್ರ ಆಯ್ಕೆಗೊಂಡಿದೆ~ ಎಂದು ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷ ಸುಪ್ರನ್ ಸೆನ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry