ಆದಾಯ ತೆರಿಗೆ ವಿನಾಯ್ತಿ ಮಿತಿ: ರೂ 3 ಲಕ್ಷಕ್ಕೆ ಹೆಚ್ಚಳ?

7

ಆದಾಯ ತೆರಿಗೆ ವಿನಾಯ್ತಿ ಮಿತಿ: ರೂ 3 ಲಕ್ಷಕ್ಕೆ ಹೆಚ್ಚಳ?

Published:
Updated:

ನವದೆಹಲಿ (ಪಿಟಿಐ): ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ  3 ಲಕ್ಷದವರೆಗೆ ಹೆಚ್ಚಿಸಬೇಕು ಎಂದು ಹಣಕಾಸು ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.ನೇರ ತೆರಿಗೆ ನೀತಿ ಸಂಹಿತೆಗೆ (ಡಿಟಿಸಿ) ಸಂಬಂಧಿಸಿದ ವರದಿ ಸ್ವೀಕರಿಸಲು ಶುಕ್ರವಾರ ಇಲ್ಲಿ ಸಭೆ ಸೇರಿದ್ದ ಸಮಿತಿಯು, ಅಂತಿಮ ನಿರ್ಧಾರಕ್ಕೆ ಬರಲಿಲ್ಲ. ಕೆಲ ವಿಷಯಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗದ ಕಾರಣಕ್ಕೆ ಸಮಿತಿಯು ಇದೇ 17ರಂದು ಮತ್ತೆ ಸಭೆ ಸೇರಲಿದೆ.ಬಿಜೆಪಿ ಮುಖಂಡ ಯಶವಂತ ಸಿನ್ಹಾ ನೇತೃತ್ವದಲ್ಲಿನ ಸಮಿತಿಯು, ಉದ್ದೇಶಿತ `ಡಿಟಿಸಿ~ ಮಸೂದೆಯ  ಕರಡು ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಂಗೀಕರಿಸಬೇಕಾಗಿದೆ.   ವರದಿ ಅಂಗೀಕರಿಸುವ ಮುನ್ನ ಹಲವಾರು ಸಂಗತಿಗಳನ್ನು ವಿವರವಾಗಿ ಚರ್ಚಿಸಬೇಕಾಗಿದೆ ಎನ್ನುವ ಕಾರಣಕ್ಕೆ ಸಭೆ ಮುಂದೂಡಲಾಗಿದೆ. ಸಮಿತಿಯು ಫೆ. 17, 24 ಮತ್ತು ಮಾರ್ಚ್ 2ರಂದು ಮತ್ತೆ ಸಭೆ ಸೇರಲಿದೆ.ಮೂಲಗಳ ಪ್ರಕಾರ, ಸರ್ಕಾರವು ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ್ಙ 3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಸಮಿತಿ ಬಯಸಿದೆ. ಹಣದುಬ್ಬರವು ಎರಡಂಕಿ ಹತ್ತಿರ ಇರುವುದರಿಂದ ರೂಪಾಯಿಯ ಖರೀದಿ ಸಾಮರ್ಥ್ಯ ಕುಸಿಯುತ್ತಿರುವ ಕಾರಣಕ್ಕೆ ಈ ಮಿತಿ ಹೆಚ್ಚಿಸಬೇಕು ಎನ್ನುವುದು ಸಮಿತಿಯ ನಿಲುವಾಗಿದೆ. `ಡಿಟಿಸಿ~ ಮಸೂದೆಯಲ್ಲಿನ ಮೂಲ ಪ್ರಸ್ತಾವದ ಪ್ರಕಾರ ಆದಾಯ ತೆರಿಗೆ ವಿನಾಯ್ತಿ ಮಿತಿ  ್ಙ 2 ಲಕ್ಷದವರೆಗೆ ಮಾತ್ರ ಹೆಚ್ಚಳಗೊಳ್ಳಲಿದೆ.ಪ್ರತ್ಯೇಕ ವರ್ಗೀಕರಣ: ಸಮಿತಿ ಸಿದ್ಧಪಡಿಸಿರುವ ಕರಡು ವರದಿಯಲ್ಲಿ, ಆದಾಯ ತೆರಿಗೆ ಪರಿಗಣಿಸಲು ಗೃಹ ಮತ್ತು ವಾಣಿಜ್ಯ ಆಸ್ತಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು ಎಂದೂ ಸಲಹೆ ನೀಡಲಾಗಿದೆ. ಈ ಎರಡೂ ವರಮಾನ ಮೂಲಗಳ ಮೇಲೆ ಬೇರೆ, ಬೇರೆ ತೆರಿಗೆ ದರಗಳನ್ನು ವಿಧಿಸಬೇಕು ಎಂಬುದು ಸ್ಥಾಯಿ ಸಮಿತಿಯ ಧೋರಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry