ಮಂಗಳವಾರ, ಆಗಸ್ಟ್ 11, 2020
27 °C

ಆದಾಯ ತೆರಿಗೆ: ವೇತನದಾರರಿಗೆ ಈ ವರ್ಷವೇ ರಿಟರ್ನ್ಸ್ ತಲೆನೋವು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಐದು ಲಕ್ಷ ರೂಪಾಯಿಗಳವರೆಗಿನ ವಾರ್ಷಿಕ ಆದಾಯ ಉಳ್ಳ ಸುಮಾರು 85 ಲಕ್ಷ ವೇತನದಾರ ತೆರಿಗೆ ಪಾವತಿದಾರರು ಈಗಿನಿಂದಲೇ ಆದಾಯ ತೆರಿಗೆ ವಿವರಗಳನ್ನು (ಐಟಿ ರಿಟರ್ನ್ಸ್ ) ಸಲ್ಲಿಸಬೇಕಾಗಿಲ್ಲ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ವಾರ್ಷಿಕ 5 ಲಕ್ಷ ರೂಪಾಯಿಗಳವರೆಗಿನ ಆದಾಯ ಹೊಂದಿರುವ ವೇತನದಾರರು ಐಟಿ ರಿಟರ್ನ್ಸ್ ಸಲ್ಲಿಸಬೇಕಾದ ಅಗತ್ಯ ಇಲ್ಲ. ಜೂನ್ ಮೊದಲ ವಾರದಲ್ಲಿ ಇದನ್ನು ನಾವು ಆಧಿಕೃತವಾಗಿ ಘೋಷಿಸಲಿದ್ದೇವೆ’ ಎಂದು  ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಸುಧೀರ ಚಂದ್ರ ಇಲ್ಲಿ ವರದಿಗಾರರಿಗೆ ತಿಳಿಸಿದರು.ಈ ಯೋಜನೆಯು 2011-12ರ ಸಾಲಿನಿಂದಲೇ ಅನ್ವಯಿಸಲಿದೆ. ಅಂದರೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಅರ್ಹ ವೇತನದಾರರು  2010-11 ರ ಆರ್ಥಿಕ ವರ್ಷದ ಆದಾಯ ತೆರಿಗೆ ವಿವರಗಳನ್ನ್ನು 2011-12 ರ ಸಾಲಿನಲ್ಲಿ ಸಲ್ಲಿಸಬೇಕಾಗಿಲ್ಲ.ಏನಿದ್ದರೂ ಹಣ ಮರುಪಾವತಿ ಬಯಸುವ ತೆರಿಗೆ ಪಾವತಿದಾರರು ತಮ್ಮ ತೆರಿಗೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ ಎಂದ್ರ ಸುಧೀರ ಚಂದ್ರ ನುಡಿದರು.2011ರ ಹಣಕಾಸು ಮಸೂದೆಯ ನೆನಪಿನ ಟಿಪ್ಪಣಿಯ ಪ್ರಕಾರ, ಆದಾಯ ತೆರಿಗೆ ವಿವರ ಸಲ್ಲಿಸಬೇಕಾದ ಅಗತ್ಯತೆಯಿಂದ ವಿನಾಯ್ತಿಗೆ ಒಳಪಡಿಸುವ ವ್ಯಕ್ತಿಗಳ ವರ್ಗಗಳ ವಿವರದ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಲಿದೆ.ಡಿವಿಡೆಂಡ್, ಬಡ್ಡಿ ಇತ್ಯಾದಿ ಇತರ ಮೂಲಗಳ ಆದಾಯ ಹೊಂದಿದ್ದು, ಆದಾಯ ತೆರಿಗೆ ವಿವರ ಸಲ್ಲಿಸಲು ಬಯಸದೇ ಇದ್ದರೆ ಅಂತಹ ವೇತನದಾರರು ತಮ್ಮ ಇಂತಹ ಇತರ ಮೂಲಗಳ ಆದಾಯ ಬಗ್ಗೆ ತಮ್ಮ ಸಂಸ್ಥೆಗಳ ಮಾಲೀಕರಿಗೆ ತೆರಿಗೆ ಕಡಿತದ ಸಲುವಾಗಿ ಮಾಹಿತಿ ನೀಡಬೇಕು. ಇಂತಹ ಪರಿಸ್ಥಿತಿಯಲ್ಲಿ ವೇತನದಾರರಿಗೆ ನೀಡಲಾಗುವ ಫಾರಂ 16ನ್ನೇ ಆದಾಯ ತೆರಿಗೆ ವಿವರ (ಐಟಿ ರಿಟರ್ನ್ಸ್) ಎಂಬುದಾಗಿ ಪರಿಗಣಿಸಲಾಗುವುದು.ಹಾಲಿ ವ್ಯವಸ್ಥೆಯಲ್ಲಿ, ಬೇರೆ ಆದಾಯ ಮೂಲ ಇಲ್ಲದ ವೇತನದಾರರು ಫಾರಂ 16ರ ವಿವರಗಳನ್ನೇ ನಮೂದಿಸಿ, ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದು ಇದರಿಂದ ಅದೇ ಮಾಹಿತಿಯ ಮರು ಸಲ್ಲಿಕೆಯಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.