ಶುಕ್ರವಾರ, ಡಿಸೆಂಬರ್ 6, 2019
20 °C

ಆದಾಯ ತೆರಿಗೆ ಸೇವಾ ಕೇಂದ್ರ ಉದ್ಘಾಟನೆ

Published:
Updated:
ಆದಾಯ ತೆರಿಗೆ ಸೇವಾ ಕೇಂದ್ರ ಉದ್ಘಾಟನೆ

ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ನಗರದ ಮಿಷನ್ ರಸ್ತೆಯಲ್ಲಿನ  ಯುನಿಟಿ ಕಟ್ಟಡ ಸಂಕೀರ್ಣದಲ್ಲಿ ಇರುವ  ಆದಾಯ ತೆರಿಗೆ ಕಚೇರಿಯಲ್ಲಿ ಹೊಸದಾಗಿ ಆರಂಭಿಸಿರುವ ಸೇವಾ ಕೇಂದ್ರವನ್ನು, ಆದಾಯ ತೆರಿಗೆ ಮುಖ್ಯ ಕಮಿಷನರ್ ಎಂ. ಎಲ್. ಅಗರವಾಲ್ ಅವರು ಶುಕ್ರವಾರ ಉದ್ಘಾಟಿಸಿದರು.ತೆರಿಗೆದಾರರಿಗೆ ಅತ್ಯುತ್ತಮ ಸೇವೆ ಒದಗಿಸಲು ಈ ಸೇವಾ ಕೇಂದ್ರ ನೆರವಾಗಲಿದೆ. ಸರ್ಕಾರಿ ಕಚೇರಿಗಳ ಸೇವಾ ಗುಣಮಟ್ಟ ನಿರ್ವಹಣೆಯ ನಿಯಮ `ಸೇವೊತ್ತಮ~ ಪರಿಕಲ್ಪನೆಯನ್ನು ಈ ಕೇಂದ್ರದಲ್ಲಿ ಪಾಲಿಸಲಾಗುವುದು. ತರಬೇತಿ ಪಡೆದ ಸಿಬ್ಬಂದಿಯು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ತೆರಿಗೆದಾರರಿಗೆ ಅತ್ಯುತ್ತಮ ಸೇವೆ ಒದಗಿಸಲಿದ್ದಾರೆ.  ಈ ಸೇವಾ ಕೇಂದ್ರದಲ್ಲಿ  ಆದಾಯ ತೆರಿಗೆ ಲೆಕ್ಕಪತ್ರ ಗಳನ್ನು (ಐ.ಟಿ ರಿಟರ್ನ್ಸ್) ಸಲ್ಲಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಪ್ರತಿಕ್ರಿಯಿಸಿ (+)