ಆದಾಯ ಪ್ರಮಾಣ ಪತ್ರ: ಸಾರ್ವಜನಿಕರ ಗಮನಕ್ಕೆ

7

ಆದಾಯ ಪ್ರಮಾಣ ಪತ್ರ: ಸಾರ್ವಜನಿಕರ ಗಮನಕ್ಕೆ

Published:
Updated:

ಗದಗ:  ಕಂದಾಯ ಇಲಾಖೆಯಿಂದ ಪರಿಶಿಷ್ಟ ಜಾತಿ, ಪಂಗಡಗಳಿಗೆ ನೀಡಲಾಗುತ್ತಿರುವ ಜಾತಿ ಪ್ರಮಾಣ ಪತ್ರಗಳು  ರದ್ದುಗೊಳಿಸುವವರೆಗೂ ಜಾರಿಯಲ್ಲಿರು­ತ್ತವೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಆದಾಯ ಪ್ರಮಾಣ ಪತ್ರಗಳು 5 ವರ್ಷಗಳ ಅವಧಿ ವರೆಗೆ  ಸಿಂಧುತ್ವದಲ್ಲಿರುತ್ತವೆ.ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು  ಪಡೆಯುವ ಇಲಾಖೆಯವರು ಮೂಲ ಪ್ರಮಾಣ ಪತ್ರ­ವನ್ನು ಪರಿಶೀಲಿಸಿ ದೃಢೀಕರಿಸಿದ ಪ್ರತಿಯನ್ನು ಇಲಾಖೆಗಳ ಮಾಹಿತಿಗೆ ಇಟ್ಟುಕೊಂಡು ಮೂಲ ಪ್ರಮಾಣ ಪತ್ರವನ್ನು ಹಿಂದಿರುಗಿಸಲು  ಪ್ರಕಟಿಸಲಾಗಿದೆ. ಈ ಪ್ರಕಟಣೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಸಂಖ್ಯೆ: ಕಂಇ:­208:­ಬಾದಾಅ:2013 ಡಿಸೆಂಬರ್‌ 17 ರ ಅನ್ವಯ ಹೊರ­ಡಿಸ­ಲಾಗಿದೆ   ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಮಹಿಳೆಯರ ಸಹಾಯವಾಣಿ ಆರಂಭ

ಗದಗ: ಮಹಿಳೆಯರ ಸಂರಕ್ಷಣೆ ಕಾಯಿ­ದೆಯ ಅನುಷ್ಠಾನ ಪರಿಣಾಮ­ಕಾರಿ ಆಗ­ಬೇಕು ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾ­ಧೀಶ ಟಿ.ಎಚ್‌.­ಆವಿನ ಹೇಳಿ­ದರು. ಜಿಲ್ಲಾಡಳಿತ ಭವನದಲ್ಲಿ ಸೋಮ­ವಾರ ಏರ್ಪಡಿಸಿದ್ದ ಕೌಟುಂಬಿಕ ದೌರ್ಜನ್ಯ­ದಿಂದ ಮಹಿಳೆಯರ ಸಂರ­ಕ್ಷಣಾ ಕಾಯ್ದೆ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆ­ಯರ ಸಂರಕ್ಷಣೆ ಕಾಯ್ದೆಯ ಕಾರ್ಯಾಗಾರದ ಸದು­ಪಯೋಗ­ವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry