ಭಾನುವಾರ, ಏಪ್ರಿಲ್ 11, 2021
20 °C

ಆದಿಮಾನವರ ವಾಸದ ಬಗ್ಗೆ ಹೆಚ್ಚು ಸಂಶೋಧನೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ಶಿಡ್ಲಪಡಿ~ ಮತ್ತು ಗುಡ್ಡದ ಹನುಮಪ್ಪನ ಬೆಟ್ಟದಲ್ಲಿ ಆದಿ ಮಾನವರು ವಾಸವಾಗಿದ್ದ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದು ಕರ್ನಾಟಕದ ಪ್ರಾಚ್ಯ ಇತಿಹಾಸ ಸಂಶೋಧಕ ಡಾ. ಅ.ಸುಂದರ್ ಅಭಿಪ್ರಾಯಪಟ್ಟರು.ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ (ರಾಶಿ) 17ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಆಗಮಿಸಿರುವ ದೇಶದ ವಿವಿಧ ರಾಜ್ಯಗಳ ಪ್ರಾಚ್ಯ ಇತಿಹಾಸ ಸಂಶೋಧಕರು ಭಾನುವಾರ ಇತಿಹಾಸಪೂರ್ವ ಕಾಲದ ಮಾನವನ ನೆಲೆಯಾದ `ಶಿಡ್ಲಪಡಿ~ ಮತ್ತು ಗುಡ್ಡದ ಹನುಮಪ್ಪನ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.`ಶಿಡ್ಲಪಡಿ~ಯಲ್ಲಿ ಕಪ್ಪೆ ಆರಭಟ್ಟನ ಮೂಲ ಶಾಸನ ಮತ್ತು ಶಂಖ ಲಿಪಿಯಲ್ಲಿ ಇರುವ ಮತ್ತೊಂದು ಶಾಸನದ ಬಗ್ಗೆ ವಿವರಿಸಿದ ಅವರು, ಸುಮಾರು 4,000 ವರ್ಷಗಳ ಹಿಂದೆ ಶಿಡ್ಲಪಡಿಯಲ್ಲಿ ಸಣ್ಣ ಸಮುದಾಯವೊಂದು ಜೀವಿಸಿದ್ದ ಕುರುಹುಗಳು ಇವೆ ಎಂದು ಹೇಳಿದರು.ಅಲ್ಲದೇ `ರಾಶಿ~ ತಂಡಕ್ಕೆ `ಶಿಡ್ಲಪಡಿ~ ಮತ್ತು ಕುಟಕನಕೆರೆ ಸಮೀಪದ ಗುಡ್ಡದ ಹನುಮಪ್ಪನ ಬೆಟ್ಟದಲ್ಲಿ ಕಂಡುಬರುವ ಇತಿಹಾಸ ಪೂರ್ವ ಕಾಲದ ಗವಿವರ್ಣ ಚಿತ್ರ ಮತ್ತು ಕಲ್ಲಾಸರೆ ಚಿತ್ರಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.ಪಶ್ಚಿಮ ಬಂಗಾಳದ ಕೋಲ್ಕತ್ತ ವಿಶ್ವವಿದ್ಯಾಲಯದ ಮಾನವ ಶಾಸ್ತ್ರಜ್ಞ ಡಾ. ಸೋಮನಾಥ ಚಕ್ರವರ್ತಿ, ಕೇರಳದ ಬೆನ್ನಿ ಕುರಿಯನ್, ಆಗ್ರಾದ ಡಾ.ಗಿರಿರಾಜ ಕುಮಾರ, ಬಾದಾಮಿಯ ಬಾರಾವಲಿ, ಎ.ಕೆ. ಪೂಜಾರ, ಇಷ್ಟಲಿಂಗ ಸಿರಸಿ, ಚಂದ್ರು ಕಟಗೇರಿ, ಡಾ. ಶಿಲಾಕಾಂತ ಪತ್ತಾರ, ಪುಣೆಯ ಮೋಹನ್, ಮೈಸೂರು ವಿಶ್ವವಿದ್ಯಾಲಯದ ಡಾ. ಶೋಭಾ ಮೊದಲಾದ ಪ್ರಾಚ್ಯ ಇತಿಹಾಸ ಸಂಶೋಧಕರು ಗುಡ್ಡಕ್ಕೆ ಭೇಟಿ ನೀಡಿದ ತಂಡದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.