ಆದಿವಾಸಿಗಳ ವಿರುದ್ಧದ ದೂರು ವಾಪಸ್: ಸಚಿವ

7

ಆದಿವಾಸಿಗಳ ವಿರುದ್ಧದ ದೂರು ವಾಪಸ್: ಸಚಿವ

Published:
Updated:

ಎಚ್.ಡಿ.ಕೋಟೆ: ಆದಿವಾಸಿಗಳು ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸುವ ಸಂದರ್ಭಗಳಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಅವರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂತೆಗೆದುಕೊಳ್ಳುವುದಾಗಿ ಸಮಾಜ ಕಲ್ಯಾಣ ಮತ್ತು ಬಂದಿಖಾನೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ಪರಿಶಿಷ್ಟ ಪಂಗಡಗಳ ನಿಗಮದ ವತಿಯಿಂದ `ಬುಡಕಟ್ಟು ಆದಿವಾಸಿಗಳಿಗೆ ಕಾನೂನು ಅರಿವು~ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ದರು. ಅಮಾಯಕರಾದ ಆದಿವಾಸಿ ಗಳಿಗೆ ಕಾನೂನಿನ ಬಗ್ಗೆ ಹೆಚ್ಚು ಅರಿವು ಇಲ್ಲದೆ ಕಾನೂನು ಉಲ್ಲಂಘನೆ ಆಗಿರುವುದರಿಂದ ಅವರ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂತೆ ಗೆದುಕೊಳ್ಳಲಾಗುವುದು.

 

ಗಿರಿಜನರ ಹೆಸರಿನಲ್ಲಿ ಅನೇಕ ಸರ್ಕಾರೇತರ ಸಂಘ ಸಂಸ್ಥೆಗಳು ದೇಶ ಮತ್ತು ವಿದೇಶದ ಹಣವನ್ನು ಕೊಳ್ಳೆಹೊಡೆಯುತ್ತಿವೆ ಎಂದು ಆರೋಪಿಸಿದರು. ಬುಡಕಟ್ಟು ಜನರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ದಕ್ಕುತ್ತಿಲ್ಲ ಈ ಬಗ್ಗೆ ಸರ್ಕಾರದ ಕಾನೂನುಗಳಲ್ಲಿಯೇ ತೊಡಕಿದೆಯೋ ಎಂಬುದನ್ನು ಪರಿಶೀಲಿ ಸಬೇಕು. ಆದಿವಾಸಿಗಳ ಹಕ್ಕುಗಳು ಧಮನವಾಗುತ್ತಿರುವ ಬಗ್ಗೆ ಇಂತಹ ಕಾರ್ಯಾಗಾರಗಳ ಮೂಲಕ ಚರ್ಚಿಸಲು ಸಾಧ್ಯ.ಸರ್ಕಾರದ 53 ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಅನ್ಯಾಯವಾ ದಾಗ ಅದನ್ನು ಪರಿಶೀಲಿಸಿ ನ್ಯಾಯ ದೊರಕಿಸುವ ಅಧಿಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಇದೆ ಎಂದರು.ಸಚಿವ ಎಸ್.ಎ.ರಾಮದಾಸ್ ಮಾತ ನಾಡಿ ಆದಿವಾಸಿಗಳಿಗೆ ಕಲ್ಪಿಸಿರುವ ಮೀಸಲಾತಿಯಲ್ಲಿ ಸರ್ಕಾರಿ ಸೌಲಭ್ಯ ಗಳು ಸರಿಯಾಗಿ ದೊರಕುತ್ತಿಲ್ಲ. ಇದ ರಿಂದ ಅವರಿಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ. ಆದಿವಾಸಿ ವಿದ್ಯಾವಂತ ಯುವಕರಿಗೆ ಉದ್ಯೋ ಗಾವಕಾಶ ಸೃಷ್ಟಿ ಹಾಗೂ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು.ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ ಕೇಂದ್ರ ಸರ್ಕಾರವು 2006-11ರವರಗೆ 4 ಸಾವಿರ ಕೋಟಿ ಅನುದಾನವನ್ನು ಆದಿವಾಸಿಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಸರ್ಕಾರ ಕೇವಲ 40 ಕೋಟಿಯಷ್ಟು ಹಣವನ್ನು ಮಾತ್ರ ಬಳಸಿಕೊಂಡಿದೆ ಎಂದರು.ಆದಿವಾಸಿಗಳ ಪರವಾಗಿ ಮಾತ ನಾಡಿದ ವಡ್ಡರಗುಡಿ ಚಿಕ್ಕಣ್ಣ ವಿದೇಶ ದಿಂದ ಬಂದ ನಿರಾಶ್ರಿತ ಟಿಬೆಟನ್ನರಿಗೆ ನೀಡಿರುವ ಪುನರ್ವಸತಿ ಕಲ್ಪಿಸಿರುವಂತೆ ಸ್ಥಳೀಯ ಆದಿವಾಸಿಗಳಾದ ನಮಗೂ ಅದೇ ರೀತಿಯಲ್ಲಿ ಪುನರ್ವಸತಿ ಕಲ್ಪಿಸಿ, ಆದಿವಾಸಿಗಳಲ್ಲಿರುವ ವಿದ್ಯಾವಂತರಿಗೆ ಕಡ್ಡಾಯ ಉದ್ಯೋಗ ಹಾಗೂ ಒಳಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದರು.ಲ್ಯಾಂಪ್ಸ್ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ತಾಲ್ಲೂಕು ಲ್ಯಾಂಪ್ಸ್ ವಿಜಯ    ಕುಮಾರ್, ಫೆಡಿನ ಸೋಮಣ್ಣ ಮಾತನಾಡಿದರು. ಶಾಸಕ ಚಿಕ್ಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಸಮಾಜ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಇ.ವೆಂಕಟಯ್ಯ, ಎಡಿಜಿಪಿ ಚಿಕ್ಕೆರೂರ್, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್, ಸಿಇಓ ಸತ್ಯವತಿ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಜಿ.ಎಸ್. ಸೋಮಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ಎಂ.ಚಿಕ್ಕಣ್ಣೇಗೌಡ, ನಂದಿನಿಚಂದ್ರಶೇಖರ್, ಎಚ್.ಆರ್. ಭಾಗ್ಯಲಕ್ಷ್ಮಿನಿಂಗರಾಜು, ಎಚ್.ಸಿ. ಮಂಜುನಾಥ್, ಪದ್ಮಬಸವರಾಜು, ರಾಜಲಕ್ಷ್ಮೀನಾಗೇಂದ್ರಸ್ವಾಮಿ, ತಾ.ಪಂ. ಅಧ್ಯಕ್ಷ ಜಿ.ಗೋಪಾಲಸ್ವಾಮಿ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry