ಸೋಮವಾರ, ಅಕ್ಟೋಬರ್ 21, 2019
23 °C

ಆದುದ್ದೆಲ್ಲಾ ಒಳಿತೇ..?

Published:
Updated:

ಕ್ರಿಯೇಟಿವ್ ಥಿಯೇಟರ್ : ಶುಕ್ರವಾರ ಆದುದ್ದೆಲ್ಲಾ ಒಳಿತೇ..? ಹಾಸ್ಯ ನಾಟಕ. ನಿರ್ದೇಶನ: ಪ್ರಮೋದ್ ಶಿಗ್ಗಾಂವ್. ರಚನೆ: ಸುಂದರ್. ಗೀತ ರಚನೆ: ಡಾ. ಕೆ. ವೈ. ನಾರಾಯಣ ಸ್ವಾಮಿ. ಸಂಗೀತ: ಗಜಾನನ ಟಿ. ನಾಯಕ್.ಇದು ಕನ್ನಡದ ಖ್ಯಾತ ಹಾಸ್ಯ ಲೇಖಕಿ  ಟಿ. ಸುನಂದಮ್ಮ ಅವರ ಬರಹದಿಂದ ಪ್ರೇರಿತವಾದ ನಾಟಕ. ಮಧ್ಯಮ ವರ್ಗದ ಗಂಡ-ಹೆಂಡಿರ ನಡುವಿನ ದೈನಂದಿನ ಕಚ್ಚಾಟ, ಪೈಪೋಟಿ ಅವರ ಅತ್ತೆಗಿರಿ-ಮಾವನಗಿರಿಯ ಆಶಯಗಳು ತರುವ ತಾಪತ್ರಯ, ಕರ್ನಾಟಕದ ಸಣ್ಣ ಹಳ್ಳಿ ಹೆಣ್ಣು ಬಹುಭಾಷಿಕರಿರುವ ಮುಂಬೈನ ಫ್ಲಾಟ್‌ಗೆ  ಭೇಟಿ ನೀಡಿದಾಗ ಆಗುವ ಅವಾಂತರಗಳು, ಸಂಪ್ರದಾಯಸ್ಥ ಮನೆತನದ ಹುಡುಗಿ ಫ್ರೆಂಚ್ ಹುಡುಗನನ್ನು ಮದುವೆಯಾಗಿ ಮನೆಗೆ ಕರೆತಂದಾಗುವ ಉಂಟಾಗುವ ಫಜೀತಿ ಇವೇ ಈ ನಾಟಕದ ವಸ್ತು. ನಾಟಕದ ಒಂದೊಂದು ಘಟನೆಯೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸುವಂತಹದ್ದು. ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30.

Post Comments (+)