ಶುಕ್ರವಾರ, ಜೂನ್ 25, 2021
22 °C

ಆದೇಶಕ್ಕೆ ತಲೆಬಾಗುವೆ- ಸಂತೋಷ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಮೇಲ್ನೋಟಕ್ಕೆ ಅನುಮಾನ ಮೂಡಿದ್ದ ಕಾರಣದಿಂದಲೇ ನಾನು ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಅವರ ಹೆಸರು ಸೇರಿಸಿದ್ದೆ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ಬುಧವಾರ ರದ್ದು ಮಾಡಿದ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ನ್ಯಾ. ಹೆಗ್ಡೆ, `ಹೈಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗುತ್ತೇನೆ. ಲಂಚದ ಪರಿಕಲ್ಪನೆ ಸಾಕಷ್ಟು ವಿಶಾಲವಾಗಿದೆ. ಲಂಚ ಪಡೆಯುವುದು ಅಪರಾಧ ಹೌದೋ ಅಲ್ಲವೋ ಎಂಬುದು ಗ್ರಹಿಕೆಯನ್ನು ಆಧರಿಸಿದೆ. ಬೇರೊಬ್ಬರ ಮೂಲಕ ಲಂಚ ಪಡೆಯುವುದು ಇನ್ನು ಮುಂದೆ ಸ್ವೀಕಾರಾರ್ಹ ಆಗಬಹುದು~ ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದರು.`ಯಡಿಯೂರಪ್ಪ ಅವರ ಸಂಬಂಧಿಕರು ಹಣ ಪಡೆದುಕೊಂಡಿದ್ದು ಒಳ್ಳೆಯ ಉದ್ದೇಶಕ್ಕೆ ಆಗಿರಲಿಲ್ಲ. ಹೈಕೋರ್ಟ್ ನೀಡಿರುವ ಆದೇಶವನ್ನು ನಾನು ಟೀಕಿಸುತ್ತಿಲ್ಲ. ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಕಂಪೆನಿಯೊಂದು ಯಡಿಯೂರಪ್ಪ ಅವರ ಸಂಬಂಧಿಕರಿಗೆ 30 ಕೋಟಿ ರೂಪಾಯಿಗಳನ್ನು ಚೆಕ್ ಮೂಲಕ ಸಂದಾಯ ಮಾಡಿತ್ತು. ಕಂಪೆನಿ ಹೀಗೆ ಸಂದಾಯ ಮಾಡಿರುವ ಕ್ರಮವೇ ಮೇಲ್ನೋಟಕ್ಕೆ ಅನುಮಾನ ಮೂಡಿಸುತ್ತದೆ. ಇದು ಅಕ್ರಮವಾಗಿ ಪಡೆದ ಹಣವಾದ ಕಾರಣ, ಈ ಕುರಿತು ಹೆಚ್ಚಿನ ತನಿಖೆ ಆಗಬೇಕು ಎಂದು ನಾನು ಹೇಳಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಹಣ ಪಡೆದುಕೊಂಡಿರುವುದನ್ನು ಇದುವರೆಗೆ ಯಾರೂ ನಿರಾಕರಿಸಿಲ್ಲ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.