ಬುಧವಾರ, ಮೇ 18, 2022
27 °C

ಆಧಾರ್ಗೂ ಕಾಲಿಟ್ಟ ಭ್ರಷ್ಟಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ  `ರಾಷ್ರೀಯ ಆಧಾರ್ ಗುರುತಿನ ಚೀಟಿ~ ವಿತರಣೆ ಕಾರ್ಯಕ್ರಮ ಅನೇಕ ಗೊಂದಲಗಳ ನಡುವೆಯು ಚಾಲ್ತಿಯಲ್ಲಿದೆ.

ಅದರೆ ನೆಲಮಂಗಲದಲ್ಲಿ ಈ ಕಾರ್ಯಕ್ರಮ ಭ್ರಷ್ಟಾಚಾರಕ್ಕೆ ಎಡೆಕೊಟ್ಟಿರುವುದು ದುರಂತ. ಇಲ್ಲಿನ  `ರಾಷ್ರೀಯ ಆಧಾರ್ ಗುರುತಿನ ಚೀಟಿ~ ವಿತರಣಾ ಏಜೆನ್ಸಿಯವರು ದಿನ ಒಂದಕ್ಕೆ 50 ಮುಂಗಡ ಟೋಕನ್ ನೀಡುವ ವವಸ್ಥೆ ಮಾಡಿಕೊಂಡು ಮುಂದಿನ ಮೂರು ನಾಲ್ಕು ತಿಂಗಳುಗಳ ನಂತರದ ದಿನಾಂಕ ನೀಡಿ ಕಳುಹಿಸುತ್ತಿದ್ದಾರೆ.

 ಅದರೆ ದಲ್ಲಾಳಿಗಳ ಮೂಲಕ 100 ರೂಪಾಯಿಗಳನ್ನು ಕೊಟ್ಟರೆ ಯಾವುದೇ ದಾಖಾಲಾತಿ ಇಲ್ಲದಿದ್ದವರಿಗೂ ಆಧಾರ್ ಗುರುತಿನ ಚೀಟಿ ನೋಂದಣಿಯನ್ನು ಆ ದಿನವೇ ಮಾಡಲಾಗುತ್ತಿದೆ. ಅಂದರೆ ಹಣ ನೀಡಿದವರಿಗೆ ಮೊದಲು ನೀಡದಿದ್ದರೆ ಮೂರ‌್ನಾಲ್ಕು ತಿಂಗಳು ಕಾಯಬೇಕು ಎನ್ನುವುದು ಸರಿಯೇ? ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.