ಭಾನುವಾರ, ಡಿಸೆಂಬರ್ 15, 2019
26 °C

ಆಧಾರ್‌ ಕಾರ್ಡ್‌: ನೂಕು ನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧಾರ್‌ ಕಾರ್ಡ್‌: ನೂಕು ನುಗ್ಗಲು

ಕನಕಗಿರಿ: ಸರ್ಕಾರಿ ಸೌಲಭ್ಯ ಪಡೆ­ಯಲು ಆಧಾರ್‌ ಕಾರ್ಡ್ ಕಡ್ಡಾಯ ಎಂದು ಸರ್ಕಾರ ಘೋಷಣೆ  ಮಾಡಿದ ಹಿನ್ನೆಲೆಯಲ್ಲಿ ವಿವಿಧ ಗ್ರಾಮದ ಜನರು ಆಧಾರ್‌ ಭಾವಚಿತ್ರ ತೆಗೆಸಿಕೊಳ್ಳಲು ನೂಕು ನುಗ್ಗಲು ನಡೆಸಿದ್ದಾರೆ.ಕನಕಗಿರಿ, ಹುಲಿಹೈದರ ಹಾಗೂ ನವಲಿ ಹೋಬಳಿ  ಸೇರಿದಂತೆ ಕುಷ್ಟಗಿ ತಾಲ್ಲೂಕು ವ್ಯಾಪ್ತಿಗೆ ಸೇರಿರುವ ಹಾಗೂ  ಇಲ್ಲಿಗೆ ಸಮೀಪದ ಲಿಂಗದಳ್ಳಿ, ವಿರೂ­ಪಾ­ಪುರ, ಹೊಮ್ಮಿನಾಳ ಇತರ ಗ್ರಾಮಗಳ ಜನರುಇಲ್ಲಿಗೆ ಆಗಮಿಸಿ ಭಾವಚಿತ್ರ ತೆಗೆಸಿಕೊಳ್ಳುತ್ತಿದ್ದಾರೆ.ಭಾವಚಿತ್ರ ತೆಗೆಸಿಕೊಳ್ಳಲು ಮತ­ದಾ­ರರ ಗುರುತಿನ ಚೀಟಿ, ರೇಷನ್‌ ಕಾರ್ಡ್, ಬ್ಯಾಂಕ್‌ ಖಾತೆ ಹಾಗೂ ಎಲ್‌ಪಿಜಿ  ಗ್ಯಾಸ್‌ನ ಪಾಸ್ ಬುಕ್‌ ಸೇರಿ­ದಂತೆ ಇತರ ದಾಖಲೆ ಪತ್ರಗಳನ್ನು ನೀ­ಡಲು ಜನ ಪ್ರತಿ ದಿನವೂ ಬೆಳಗ್ಗಿ­ನಿಂ­ದಲೂ  ಇಲ್ಲಿನ ಯಾತ್ರಿ ನಿವಾಸದ ಕಟ್ಟ­ಡಕ್ಕೆ ಆಗಮಿಸಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.ಭಾವಚಿತ್ರ ತೆಗೆಸಿಕೊಳ್ಳಲು ಸೆಪ್ಟಂ­ಬರ್‌ ತಿಂಗಳು ಕೊನೆಯ ದಿನ ಎಂದು ಕೆಲವರು ವದಂತಿ ಹಬ್ಬಿಸಿರುವುದು ಜನ  ನೂಕು ನುಗ್ಗಲು ನಡೆಸಲು ಕಾರಣ­ವಾಗಿದೆ ಇದನ್ನು ಜನ ನಂಬಬಾರದು, ಸರ್ಕಾರ ನಿಗದಿ ಪಡಿಸಿದ ದಿನದವರೆಗೂ ಭಾವಚಿತ್ರ ತೆಗೆಯಲಾಗುವುದು ಎಂದು ಕೇಂದ್ರದ ಮೇಲ್ವಿಚಾರಕ ಕನಕರಾಯ ‘ಪ್ರಜಾವಾಣಿ’ಗೆ ತಿಳಿಸಿದರು.ಜನರಿಗೆ ಅನುಕೂಲವಾಗಲು ಕೇಂದ್ರ­ದಲ್ಲಿ ಆರು ಕಂಪ್ಯೂಟರ್‌ಗಳು ಲಭ್ಯವಿದ್ದು ಪ್ರತಿ ದಿನ 300 ಜನರ ಭಾವಚಿತ್ರ ತೆಗೆ­ಯಲಾಗುತ್ತಿದೆ,  ಬೆಳಿಗ್ಗೆ 9ಗಂಟೆ­ಯಿಂದ ಸಂಜೆ 6ಗಂಟೆ ತನಕ ಕೇಂದ್ರದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿ­ದ್ದಾರೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ವಿದ್ಯಾರ್ಥಿ ವೇತನ, ಎಲ್‌ ಪಿಜಿ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ  ಬ್ಯಾಂಕ್‌ ಖಾತೆಗೆ ಜಮಾವಣೆ ಮಾಡುತ್ತಿರುವುದರಿಂದ ಆಧಾರ್‌ ಕಾರ್ಡ್‌ಗೆ ಮಹತ್ವ ಬಂದಿದ್ದು   ಅದನ್ನು ಪಡೆಯಲು ಜನ ಭಾವಚಿತ್ರ ತೆಗೆಯುವ ಯಾತ್ರಿ ನಿವಾಸದತ್ತ ಮುಖ ಮಾಡಿದ್ದಾರೆ.  ನೂಕು ನುಗ್ಗಲು ತಪ್ಪಿಸಲು ತಾಲ್ಲೂ­ಕು ಆಡಳಿತ ಇನ್ನೂ ಹೆಚ್ಚಿನ ಕಂಪ್ಯೂಟರ್‌ ಸೌಲಭ್ಯ ಒದಗಿಸ­ಬೇಕೆಂದು ಯುವ ಮುಂದಾಳು ಮಂಜುನಾಥ ಸಿಂದು­ವಾಳ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)