ಭಾನುವಾರ, ಮೇ 9, 2021
27 °C

ಆಧಾರ್ ಕಾರ್ಡ್‌ಗಾಗಿ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಕೇಂದ್ರ ಸರ್ಕಾರದ ಯೋಜನೆಯಾಗಿರುವ ಆಧಾರ್ ಕಾರ್ಡ್ ಅರ್ಜಿ ಪಡೆಯಲು ಪಟ್ಟಣದಲ್ಲಿ ಸೋಮವಾರ ಅಂಚೆ ಕಚೇರಿಯ ಬಳಿ ನೂಕುನುಗ್ಗಲು ಕಂಡುಬಂದಿತು. ಪ್ರಸ್ತುತ ತಾಲ್ಲೂಕಿನ್ಲ್ಲಲಿ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಲ್ಲಿ ಮಾತ್ರ ಆಧಾರ್ ಕಾರ್ಡ್‌ಗಾಗಿ ಅರ್ಜಿಗಳನ್ನು ವಿತರಿಸಿ, ನಂತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಸೋಮವಾರ ಒಂದೇ ದಿನದಲ್ಲಿ 1,700 ಅರ್ಜಿಗಳನ್ನು ವಿತರಿಸಲಾಗಿದೆ ಎಂದು ಅಂಚೆ ಕಚೇರಿ ಮೂಲಗಳು ತಿಸಿವೆ.ಒಬ್ಬರಿಗೆ 2 ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅರ್ಜಿ ಪಡೆದುಕೊಂಡವರು ಒಂದು ತಿಂಗಳೊಳಗಾಗಿ ಅಂಚೆ ಕಚೇರಿಗೆ ಬಂದು ನೋಂದಣಿ ಮಾಡಿಸಬೇಕು. ಎಲ್ಲ ನೋಂದಣಿಗಳು ಪೂರ್ಣಗೊಂಡ ನಂತರ ಮತ್ತೆ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.ತಾಲ್ಲೂಕಿನ ವಿಸ್ತೀರ್ಣ ಹೆಚ್ಚಿದ್ದು, ತಾಲ್ಲೂಕು ಕೇಂದ್ರದಿಂದ ಗಡಿ ಗ್ರಾಮಗಳು 40 ಕಿ.ಮೀ.ಗಳಷ್ಟು ದೂರದಲ್ಲಿವೆ. ಅಲ್ಲದೆ ತಾಲ್ಲೂಕಿನಾದ್ಯಂತ ಜನಸಂಖ್ಯೆ ಹೆಚ್ಚಿದ್ದು, ಅರ್ಜಿ ವಿತರಣೆ ಹಾಗೂ ನೋಂದಣಿ ಕಾರ್ಯ ನಿಧಾನಗತಿಯ್ಲ್ಲಲಿ ಸಾಗಲು ಕಾರಣವಾಗಿದೆ.ಪ್ರತಿ ದಿನವೂ ತಾಲ್ಲೂಕಿನ ವಿವಿಧ ಭಾಗಗಳ ಜನತೆ ಬಂದು ನೂಕುನುಗ್ಗಲಲ್ಲಿ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಎಲ್ಲ ಸೌಲಭ್ಯಗಳಿಗೂ ಆಧಾರ್ ಕಾರ್ಡನ್ನೇ ಕೇಳಲಾಗುತ್ತಿದೆ ಆದ್ದರಿಂದ ನೋಂದಣಿ ಮಾಡಿಸಲು ಜನರು ಕಷ್ಟಪಡುತ್ತಿದ್ದಾರೆ.ಆಧಾರ್ ಕಾರ್ಡ್ ಅರ್ಜಿ ವಿತರಣೆ ಹಾಗೂ ನೋಂದಣಿಗೆ ತಾಲ್ಲೂಕಿನ ಪ್ರತಿ ಹೋಬಳಿಗೊಂದು ಹಾಗೂ ಕೂಡ್ಲಿಗಿ ಮತ್ತು ಕೊಟ್ಟೂರು ಪಟ್ಟಣಗಳ್ಲ್ಲಲಿ ತಲಾ 2 ನೋಂದಣಿ ಕೇಂದ್ರಗಳನ್ನು ತೆರೆಯಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.