ಆಧಾರ್ ಕಾರ್ಡ್ ಗೊಂದಲ: ಸಾರ್ವಜನಿಕರ ಆಕ್ರೋಶ

6

ಆಧಾರ್ ಕಾರ್ಡ್ ಗೊಂದಲ: ಸಾರ್ವಜನಿಕರ ಆಕ್ರೋಶ

Published:
Updated:

ಕೊಪ್ಪ : ತಾಲ್ಲೂಕಿನಲ್ಲಿ ಆಧಾರ್ ಕಾರ್ಡ್ ವಿತರಣೆಯಲ್ಲಿನ ಗೊಂದಲ ಸರಿಪಡಿಸುವಂತೆ ಭಾನುವಾರ ಪುರಭ ವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿ ಕರು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 10 ಗಂಟೆಯಿಂದ ನೀಡುವ ಆಧಾರ್ ಕಾರ್ಡ್ ಅರ್ಜಿ ಪಡೆಯಲು ಬೆಳಗಿನ ಜಾವ 3 ಗಂಟೆಯಿಂದಲೇ ತಾಲ್ಲೂಕಿನ ಮೂಲೆಮೂಲೆಯ ಜನ ಪುರಭವನದ ಎದುರು ಸರತಿ ಸಾಲಿನಲ್ಲಿ ಕಾಯತೊಡಗಿದ್ದು, ಮುಂಜಾನೆ 7 ಗಂಟೆ ವೇಳೆಗೆ ಒಂದು ಸಾವಿರಕ್ಕೂ ಅಧಿಕ ಜನ ಸೇರಿದ್ದರಿಂದ ತೀವ್ರ ನೂಕುನುಗ್ಗಲು ಉಂಟಾಯಿತು. ಕೂಡಲೇ ಸ್ಥಳಕ್ಕಾಗ ಮಿಸಿದ ಪೊಲೀಸರು ಜನ ಜಂಗುಳಿ ನಿಯಂತ್ರಿಸಲು ಹರಸಾಹಸ ಪಡ ಬೇಕಾಯಿತು.ಅಡುಗೆ ಅನಿಲ, ಪಡಿತರ ವಿತರಣೆಗೆ, ಬ್ಯಾಂಕ್ ಖಾತೆ ಆರಂಭಿಸಲು ಹಾಗೂ ವಿದ್ಯಾರ್ಥಿ ವೇತನ ನೀಡಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಜನ ಆಧಾರ್ ಕಾರ್ಡ್‌ ಗಾಗಿ ಮುಗಿಬೀಳುತ್ತಿದ್ದು, ಕಾರ್ಡ್ ವಿತರಣೆಯ ಹೊಣೆಹೊತ್ತ ಸರ್ಕಾ ರೇತರ  ಮಾರ್ಸ್ಕ್  ಸಂಸ್ಥೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಗುಂಡಪ್ಪ, ತಾಲ್ಲೂಕು ಉಪಾಧ್ಯಕ್ಷ ಫ್ರಾನ್ಸಿಸ್ ಕಾರ್ಡೋಜ, ತಾ.ಪಂ. ಸದಸ್ಯ ಪೂರ್ಣಚಂದ್ರ ಇನ್ನಿತರರು ಪ್ರತಿಭಟನೆಗಿಳಿದಾಗ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವೀಣಾ ಅವರು ಪರಿಸ್ಥಿತಿ ತಿಳಿಗೊಳಿಸಿದರು.ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿ ರುವ ತಹಶೀಲ್ದಾರ್ ಅವರಿಗೆ ಆಧಾರ್ ಕಾರ್ಡ್‌ಗಾಗಿ ತಾಲ್ಲೂಕಿನ ಜನ ಪಡು ತ್ತಿರುವ ಬವಣೆ ಕಣ್ಣಾರೆ ಕಾಣುವಂತಾ ಯಿತು. ಅಸಹಾಯಕ ವೃದ್ಧರು, ಪುಟ್ಟಪುಟ್ಟ ಮಕ್ಕಳು, ಎಳೆಯ ಕಂದಮ್ಮಗಳನ್ನು ಕಂಕುಳಲ್ಲಿಟ್ಟುಕೊಂಡು ಊಟ ತಿಂಡಿಯಿಲ್ಲದೆ ಸರತಿ ಸಾಲಿನಲ್ಲಿ ಕಾಯುತ್ತಿರುವ ಮಹಿಳೆಯರ ಪರಿಸ್ಥಿತಿ ಹೇಳತೀರದು.ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾರ್ ಕಾರ್ಡ್ ವಿತರಣೆಗೆ ಸಾಧ್ಯ ವಿರುವ ಎಲ್ಲಾ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು. ಕೇವಲ 150 ಜನರಿಗೆ ಮಾತ್ರ ಅರ್ಜಿ ವಿತರಿಸಲು ನಿಗದಿ ಯಾಗಿದ್ದರೂ, ತಹಶೀಲ್ದಾರ್ ಆದೇಶ ದಂತೆ ನೆರೆದಿದ್ದ ಎಲ್ಲರಿಗೂ ಅರ್ಜಿ ವಿತರಿ ಸುವ ದಿನಾಂಕ ನಮೂದಿಸಿದ ಟೋಕನ್ ನೀಡಿ ಕಳುಹಿಸಿಕೊಡ ಲಾಯಿತು.ಟೋಕನ್ ಪಡೆದವರಿಗೆ ಇದೇ 24ರಿಂದ 29ರವರೆಗೆ ಅರ್ಜಿ ವಿತರಿ ಸಲಾಗುವುದು ಈ ದಿನಗಳಲ್ಲಿ ಉಳಿ ದವರಿಗೆ ಅರ್ಜಿ ವಿತರಿಸಲಾಗುವುದಿಲ್ಲ ಎಂದು  ಮಾರ್ಸ್ಕ್  ಸಂಸ್ಥೆ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry