ಮಂಗಳವಾರ, ನವೆಂಬರ್ 12, 2019
20 °C

ಆಧಾರ್ ಕಾರ್ಡ್ ನೀಡಿ

Published:
Updated:

ಕೇಂದ್ರ ಸರ್ಕಾರವು ಬಹಳ ಉತ್ಸಾಹದಿಂದ ಆಧಾರ್ ಕಾರ್ಡ್ ನೀಡುವ ಯೋಜನೆಯನ್ನು ಆರಂಭಿಸಿತು. ಬಹುತೇಕ ಕಡೆಗಳಲ್ಲಿ ಆಧಾರ್ ಕಾರ್ಡ್ ಪಡೆಯಲು ಜನರು ಫೋಟೋ, ಕಣ್ಣುಗಳ ಸ್ಕ್ಯಾನಿಂಗ್ ಹಾಗೂ ಕೈ ಬೆರಳುಗಳ ಗುರುತು ನೀಡಿ ಆಧಾರ್ ಕಾರ್ಡ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಕೆಲವೇ ವ್ಯಕ್ತಿಗಳಿಗೆ ಮಾತ್ರ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇನ್ನುಳಿದವರಿಗೆ ನೀಡಲು ತಡವೇಕೆ? ಆಧಾರ್ ಕಾರ್ಡ್‌ನ ಸಹಾಯವಾಣಿಗೆ ಯಾವಾಗ ಕರೆ ಮಾಡಿದರೂ ಸಂಪರ್ಕ ಸಿಗುತ್ತಿಲ್ಲ. ಇಂಟರ್‌ನೆಟ್‌ನಲ್ಲಿ ನೋಡಿದರೆ `ಶೀಘ್ರದಲ್ಲೇ ನೀವು ಆಧಾರ್ ಕಾರ್ಡ್ ಪಡೆಯುವಿರಿ' ಎಂದು ಕಳೆದ ಒಂದು ವರ್ಷದಿಂದಲೂ ಬರುತ್ತಿದೆ. ಹೀಗಾದರೆ ಯೋಜನೆ ಸಫಲವಾದೀತೆ? ಆದಷ್ಟು ಬೇಗ ಉಳಿದವರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಿ ವಿವಿಧ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಡಿ ಎಂದು ಸಂಬಂಧಪಟ್ಟವರಲ್ಲಿ ವಿನಂತಿ.

ಪ್ರತಿಕ್ರಿಯಿಸಿ (+)