ಗುರುವಾರ , ಮೇ 28, 2020
27 °C

ಆಧಾರ್: ಜಿಲ್ಲೆಯಲ್ಲಿ 5.4 ಲಕ್ಷ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಗರಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಲ್ಲಿ ಜ. 17ರವರೆಗೆ ಜಿಲ್ಲೆಯಲ್ಲಿ 5.4 ಲಕ್ಷ ಮಂದಿಯನ್ನು ನೋಂದಣಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ಜಿ.ಬೆಟಸೂರ್ ಮಠ್ ತಿಳಿಸಿದರು.ನಗರದಲ್ಲಿ 35 ಸೇರಿ ಜಿಲ್ಲೆಯಲ್ಲಿ 76 ಕೇಂದ್ರಗಳ 289 ಘಟಕಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಪ್ರತಿದಿನ 10,500ಕ್ಕೂ ಹೆಚ್ಚು ನೋಂದಣಿಯಾಗುತ್ತಿದೆ. ತಿಂಗಳ ಅಂತ್ಯಕ್ಕೆ ಹೆಚ್ಚುವರಿಯಾಗಿ 61 ಘಟಕಗಳನ್ನು ಪ್ರಾಂಭಿಸಲಾಗುವುದು. ಪುರಭವನದಲ್ಲಿ 18ರಿಂದ 20 ಘಟಕಗಳನ್ನು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು  ತಿಳಿಸಿದರು.ನಕಲಿ ಅಫಿಡವಿಟ್ ಹಾಗೂ ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಸಿದ್ದರಾಜು, ಮಧುಸೂದನ್, ಖಲೀಲ್, ಮಹದೇವ, ಪುಟ್ಟಸ್ವಾಮಿ, ವೆಂಕಟಮ್ಮ, ಮಹದೇವಮ್ಮ, ಮಹೇಶ್ ಅಲಿ ಹಾಗೂ ಎಸ್‌ಆರ್‌ವಿ ಸುಬ್ರಹ್ಮಣ್ಯ ಎಂಬುವರ  ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಕಲಿ ಅಫಿಡವಿಟ್ ನೀಡುತ್ತಿದ್ದ ಆಟೋ ಚಾಲಕ ಸಿದ್ದರಾಜು ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದಾರೆ. ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.ಸಾರ್ವಜನಿಕರು, ಮಧ್ಯವರ್ತಿಗಳು ಅಥವಾ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸದೆ ನೇರವಾಗಿ  ಆಧಾರ್ ಕೇಂದ್ರದಲ್ಲಿರುವ ಸರ್ಕಾರದಿಂದ ನೇಮಕವಾಗಿರುವ ಪರಿಶೀಲಕರ ಸಹಾಯ ಪಡೆದು ಆಧಾರ್‌ಗಾಗಿ ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.