ಆಧಾರ್ ಸಂಖ್ಯೆ ಪಡೆಯಲು ಸಲಹೆ

7

ಆಧಾರ್ ಸಂಖ್ಯೆ ಪಡೆಯಲು ಸಲಹೆ

Published:
Updated:

ಮಂಡ್ಯ: ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳ ನೆರವು ತಲುಪಿಸಲು ಆಧಾರ್ ಗುರುತಿನ ಸಂಖ್ಯೆ ಅಗತ್ಯವಾಗಿದ್ದು, ನಾಗರಿಕರು ಆದ್ಯತೆಯ ಮೇರೆಗೆ ಇದನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಸಲಹೆ ಮಾಡಿದ್ದಾರೆ.ಹೀಗೆ ಗುರುತಿನ ಸಂಖ್ಯೆ ಪಡೆಯು ವುದು ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದೆ ಎಂಬುದರ ಖಾತರಿಗೂ ನೆರವಾಗಲಿದೆ ಎಂದರು.ಜಿಲ್ಲೆಯಲ್ಲಿ ಆಧಾರ್ ಗುರುತು ಸಂಖ್ಯೆಗೆ ನೋಂದಣಿ ಕಾರ್ಯಕ್ರಮ ಅ. 3 ರಿಂದ ಆರಂಭವಾಗಿದೆ. ಸರ್ಕಾರಿ ಸವಲತ್ತುಗಳನ್ನು ಒದಗಿಸಲು ಆಧಾರ್ ಸಂಖ್ಯೆ ಹೊಂದಿದ್ದಾರೆ ಎಂದು ಅರ್ಹರನ್ನು ಗುರುತಿಸಲು ಪರಿಗಣಿಸ ಲಾಗುವುದು ಎಂದು ತಿಳಿಸಿದರು.ಚಾಲನೆ: ಸೋಮವಾರ ನಗರದ ಪುರಭವನದಲ್ಲಿಯೂ ಆಧಾರ್ ಗುರುತು ಸಂಖ್ಯೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಹಶೀಲ್ದಾರ್ ರಾಜೇಂದ್ರ ಪ್ರಸಾದ್ ಅವರು ಇಲ್ಲಿ ಗುರುತು ಸಂಖ್ಯೆಯನ್ನು ಪಡೆದರು.

ಜಿಲ್ಲಾಧಿಕಾರಿ ಡಾ. ಜಾಫರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಯಣ್ಣ, ನಗರಸಭೆ ಆಯುಕ್ತ ಪ್ರಕಾಶ್, ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry