ಆಧಾರ ನೋಂದಣಿ ಪ್ರಕ್ರಿಯೆಗೆ ಡಿಸಿ ಚಾಲನೆ

7

ಆಧಾರ ನೋಂದಣಿ ಪ್ರಕ್ರಿಯೆಗೆ ಡಿಸಿ ಚಾಲನೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ 2ನೇ ಹಂತದ ಆಧಾರ್ ನೋಂದಣಿ ಪ್ರಕ್ರಿಯೆಗೆ ಗುರುವಾರ ಗಾಳಿಬೀಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರು ಚಾಲನೆ ನೀಡಿದರು.



ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಸಾದ್ ಅವರು,  ಜಿಲ್ಲೆಯಲ್ಲಿ ಎರಡನೇ ಹಂತದ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಗಾಳಿಬೀಡಿನಲ್ಲಿ ಆರಂಬಿಸಲಾಗಿದ್ದು, ಡಿ.29ರವರೆಗೆ ನಡೆಸಲಾಗುವುದು ಎಂದು ಅವರು ತಿಳಿಸಿದರು.



ಸರ್ಕಾರದ ನಾನಾ ಸೌಲಭ್ಯಗಳನ್ನು ಪಡೆಯಲು ಆಧಾರ್ ನೋಂದಣಿ ಕಾರ್ಡ್ ಅಗತ್ಯವಾಗಿದ್ದು, ಆಧಾರ್ ಕಾರ್ಡ್ ಪಡೆಯಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಆಧಾರ್ ಕಾರ್ಡ್ ಪಡೆಯಲು ಯಾವುದಾದರೂ ಗುರುತಿನ ಚೀಟಿ, ವಿಳಾಸ ದಾಖಲೆ ಪತ್ರ ಅಥವಾ ಜನ್ಮ ದಿನಾಂಕ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.



ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಉಪವಿಭಾಗಾಧಿಕಾರಿ ಜಿ.ಪ್ರಭು, ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಿಜಾ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry