ಭಾನುವಾರ, ಜೂನ್ 13, 2021
29 °C

ಆಧುನಿಕತೆಯ ಸೋಗು: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರ್ಕಾರ ಸೇರಿದಂತೆ ಸಾಮಾನ್ಯ ಜನರ ನಡವಳಿಕೆಯು ದೈವಮುಖಿಯಾಗಿದೆ ಹೊರತು ಜೀವನಮುಖಿಯಾಗಿಲ್ಲ~ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಮಂಡ್ಯ ಜಿಲ್ಲಾ ಯುವ ಬಹರಗಾರರ ಬಳಗವು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಜೀವನ್ಮುಖಿ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಜೀವನದೆಡೆಗೆ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಸ್ವಪ್ರಯತ್ನ ಇಲ್ಲದಾಗಿದೆ. ಜನರು ಪ್ರಯತ್ನವೇ ಇಲ್ಲದೇ ಎಲ್ಲ ಕೆಲಸಗಳಿಗೂ ದೇವರ ಮೊರೆ ಹೋಗುವ ಪದ್ದತಿ ಸಾಮಾನ್ಯವಾಗಿದೆ. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಶಿಕ್ಷಿತ ವರ್ಗ ಹೋರಾಡಬೇಕು~ ಎಂದರು.`ದೇಶದಲ್ಲಿ ಒಂದೆಡೆ ಆಧುನಿಕತೆಯ ಸೋಗು ಹೆಚ್ಚುತ್ತಿದೆ, ಹಾಗೆಯೇ ಆಂತರ್ಯದ ಮೌಢ್ಯತೆಯು ಉಳಿದುಕೊಂಡಿದೆ. ಬದಲಾದ ಸ್ಥಿತಿಗೆ ಸಿದ್ದಾಂತಗಳು ಹೊಸ ಹುಟ್ಟು ಪಡೆಯಬೇಕು~ ಎಂದು ಹೇಳಿದರು.ನಾಟಕಕಾರ ಡಾ.ಚಂದ್ರಶೇಖರ ಕಂಬಾರ, `ತೆರೆಮರೆಯಲ್ಲಿದ್ದುಕೊಂಡೇ ಸಾಧನೆ ಮಾಡುತ್ತಿರುವ ಅದೆಷ್ಟು ಯುವಕರನ್ನ ಪ್ರೋತ್ಸಾಹಿಸುತ್ತಿರುವುದು ಉತ್ತಮ ಸಂಗತಿ~ ಎಂದು ಶ್ಲಾಘಿಸಿದರು.ಸಚಿವಾಲಯದ ನಿವೃತ್ತ ಅಧಿಕಾರಿ ಎಂ.ವಿ.ದೇವಶೆಟ್ಟಿಗೌಡ, ಬನಶಂಕರಿ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಎಚ್.ವೀರಭದ್ರೇಗೌಡ, ಸಾಹಿತಿ ಡಾ.ಕೆ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.