ಮಂಗಳವಾರ, ಜೂನ್ 15, 2021
21 °C

ಆಧುನಿಕ ಕೃಷಿ ಪದ್ಧತಿ ಅಳವಡಿಕೆ: ರೈತರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ರಾಜ್ಯದ ರೈತರು ಆಧುನಿಕ ಕೃಷಿ ಪದ್ಧತಿ, ಕೀಟನಾಶಕಗಳ ಸಮರ್ಪಕ ಬಳಕೆ ಬಗೆಗೆ ತಿಳಿದು ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದು ಹಾಸನ ಕೃಷಿ ವಿದ್ಯಾನಿಲಯದ ಡೀನ್ ಡಾ. ಎಂ.ಎ. ಶಂಕರ್ ತಿಳಿಸಿದರು.ತಾಲ್ಲೂಕಿನ ದೊಡ್ಡ ಕುಂಚೇವು ಗ್ರಾಮದಲ್ಲಿ ಹಾಸನ ಕೃಷಿ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ರೈತರಿಗೆ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.ಪ್ರದರ್ಶನದ ಅಂಗವಾಗಿ ಕೃಷಿ ಪದ್ಧತಿ, ಯಂತ್ರೋಪಕರಣ ಬಳಕೆ, ಕ್ರಿಮಿನಾಶಕ ಬಳಕೆ, ಸಾವಯವ ಗೊಬ್ಬರ ತಯಾರಿಕೆ, ರೇಷ್ಮೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ನೀರು ಸಂಗ್ರಹಣೆ, ಬತ್ತ ನಾಟಿ , ಮೊಲ, ಮೀನು ಸಾಕಾಣಿಕೆ, ಜಲಾನಯನ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ವಿಷಯದಲ್ಲಿ ಪದವಿ ಪಡೆದರೆ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು.ಇವುಗಳ ಪ್ರಾಯೋಗಿಕ ಪ್ರದರ್ಶನಕ್ಕೆ ಸೋಮವಾರ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಇದರಲ್ಲಿ ತಾಲ್ಲೂಕಿನ ಕೃಷಿ ಪದ್ಧತಿಯ ಮಾಹಿತಿ ಸೇರಿದಂತೆ ವಿದ್ಯಾರ್ಥಿನಿಯರು ರೈತರಿಗೆ ತಿಂಗಳಿಂದ ವಿವರಿಸಿದ ಎಲ್ಲ ಪದ್ದತಿಗಳ ಪ್ರಾಯೋಗಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಅಲ್ಲದೆ ಗಂಗಾ ಕಾವೇರಿ ಬಿತ್ತನೆ ಬೀಜದ ಮಳಿಗೆ, ಮಂಗಳಾ ಗೊಬ್ಬರ ಮಳಿಗೆಯನ್ನು ಹಾಕಲಾಗಿತ್ತು. ಮಂಗಳಾ ಕಂಪೆನಿಯವರು ಈ ಭಾಗದ 300 ಜನ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿಕೊಟ್ಟು ಆ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಹುದಾದ ಬೆಳೆಗಳ ಮಾಹಿತಿ ನೀಡಿದರು.8 ಲೀಟರ್ ಹಾಲು ನೀಡುವ ಸೈಪ್ರಸ್ ಶಾಮಿ ಮೇಕೆಗಳ ಬಗ್ಗೆ ಬೆಂಗಳೂರು ಕೃಷಿ ವಿವಿ ಸಹ ಪ್ರಾಧ್ಯಾಪಕ ಡಾ.ಬಿ.ಎಲ್. ಚಿದಾನಂದನ್ ವಿವರಿಸಿದರು. ಈ ಶಾಮಿ ಮೇಕೆಗಳನ್ನು ಅರಬ್ ದೇಶದ ಸೈಪ್ರಸ್‌ನಲ್ಲಿ ಕೆಲವು ವರ್ಷಗಳಿಂದ ಸಾಕಲಾ ಗುತ್ತಿದೆ ಎಂದು ವಿವರ ನೀಡಿದರು.ಅಲ್ಲದೆ ಈ ಕುರಿಗಳು ದಿನಕ್ಕೆ 4ರಿಂದ 8 ಲೀಟರ್ ಹಾಲು ನೀಡುತ್ತವೆ.  2ರಿಂದ 5 ಮರಿ ಹಾಕುತ್ತವೆ. ಇವುಗಳನ್ನು ಸಾಕಿದವರು ಖರ್ಚು ಕಳೆದು ಶೇ40ರಷ್ಟು ಲಾಭ ಗಳಿಸುತ್ತಾರೆ.ಆದ್ದರಿಂದ ಈ ಕುರಿಗಳ ಸಾಕಾಣಿಗೆ ಆರ್ಥಿಕವಾಗಿ ಲಾಭಕರ ಎಂದು ತಿಳಿಸಿದರು.ಕೃಷಿ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರೈತರಿಗೆ ಆಸಕ್ತಿಯಿಂದ ವಿವರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಡಿ. ರಾಮೇಗೌಡ, ನೂರಾರು ರೈತರು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.