ಆಧುನಿಕ ಕೃಷಿ : 18 ರಿಂದ ತರಬೇತಿ
ಬೀದರ್: `ಆಧುನಿಕ ಕೃಷಿ ಪದ್ಧತಿ' ಕುರಿತ ತರಬೇತಿ ಶಿಬಿರ ಔರಾದ್ ಪಟ್ಟಣದ ನಾರಾಯಣಪುರ ರಸ್ತೆಯಲ್ಲಿ ಇರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜುಲೈ 18 ರಿಂದ 20 ರವರೆಗೆ ನಡೆಯಲಿದೆ.
ಹವಾಮಾನ ಬದಲಾವಣೆ, ಮಳೆ ನೀರು ಕೊಯ್ಲು ಸಂರಕ್ಷಣೆ, ಮುಂಗಾರು ಬೆಳೆಗಳ ಬೇಸಾಯ ಕ್ರಮ, ಸಮಗ್ರ ಕೃಷಿ ಪದ್ಧತಿ, ಸಸ್ಯ ಬೆಳವಣಿಗೆಯಲ್ಲಿ ಪೋಷಕಾಂಶಗಳ ಪಾತ್ರ, ಕಿರುಧಾನ್ಯಗಳ ಮಹತ್ವ, ಕೃಷಿ ಯಂತ್ರೋಪಕರಣಗಳ ಪರಿಚಯ ಮತ್ತು ನಿರ್ವಹಣೆ, ಗುಂಪುಗಳ ರಚನೆ ಮತ್ತಿತರ ವಿಷಯ ಕುರಿತು ತರಬೇತಿ ನೀಡಲಾಗುವುದು.
ಆಸಕ್ತ ರೈತರು ಹೆಸರು ನೋಂದಣಿಗಾಗಿ ಸಹಾಯಕ ಕೃಷಿ ಅಧಿಕಾರಿ ಮಲ್ಹಾರಿರಾವ್ (9972081730) ಅಥವಾ ಸಹಾಯಕ ಕೃಷಿ ನಿರ್ದೇಶಕ ಕಲೀಂ (7259004651) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.