ಆಧುನಿಕ ಸೌಲಭ್ಯಗಳ ರಕ್ಷಣಾ ವಾಹನ

7

ಆಧುನಿಕ ಸೌಲಭ್ಯಗಳ ರಕ್ಷಣಾ ವಾಹನ

Published:
Updated:

ಕಾರವಾರ: ವೇಗದಲ್ಲಿ ಬೆಳೆಯುತ್ತಿರುವ ನಗರ, ಮಾರಿಗೊಂದು ಎನ್ನುವಂತೆ ತಲೆ ಎತ್ತುತ್ತಿರುವ ಅಪಾರ್ಟ್‌ಮೆಂಟ್, ಬಹುಮಹಡಿ ಕಟ್ಟಡಗಳು, ವಾಣಿಜ್ಯ ಮಳಿಗೆ. ದಶಕಗಳ ಹಿಂದೆ ವಿಶಾಲ ವಾಗಿದ್ದ ಪ್ರದೇಶಗಳೀಗ ಕಾಂಕ್ರೀಟ್ ಕಟ್ಟಡಗಳಿಂದ ತುಂಬಿವೆ. ದಾರಿಯನ್ನೂ ಅತಿಕ್ರಮಿಸಿ ಕಟ್ಟಡಗಳು ನಿರ್ಮಾವಾಗಿದ್ದು ರಸ್ತೆಗಳು ಕಾಲುದಾರಿಗಳಾಗಿವೆ. ಅಗ್ನಿ ಅನಾಹುತ, ಕಟ್ಟಡ ಕುಸಿತ ಸಂಭ ವಿಸಿದರೆ ಇಕ್ಕಟ್ಟಾದ ಸ್ಥಳದಲ್ಲಿ ರಕ್ಷಣಾ ಕೈಗೊಳ್ಳುವುದು ದುಸ್ತರವಾಗಿದೆ.ಇಕ್ಕಟ್ಟಾಗಿರುವ ಸ್ಥಳದಲ್ಲಿ ಅಗ್ನಿ ಅನಾಹುತಗಳು ಸಂಭವಿಸಿದ ಸಂದರ್ಭದಲ್ಲಿ  ರಕ್ಷಣಾ ಕಾರ್ಯ ಕೈಗೊಳ್ಳಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹನ ಪಡಬೇಕಾಗುತ್ತದೆ. ಕಾರ್ಯಾಚರಣೆ ವಿಳಂಬವಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳೂ ಇರುತ್ತವೆ. ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಡೆ ಯುವ ಸಲುವಾಗಿ ರಾಜ್ಯ ಸರ್ಕಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಘಟಕಕ್ಕೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಾಹನಗಳನ್ನು ನೀಡಿದೆ.ಈ ಅತ್ಯಾಧುನಿಕ ಸೌಲಭ್ಯಗಳುಳ್ಳ ಮಧ್ಯಮ ರಕ್ಷಣಾ ವಾಹನ (ಮಿಡಿ ಯಮ್ ರೆಸ್ಕ್ಯೂ ವೆಹಿಕಲ್) ಈಚೆಗೆ ಜಿಲ್ಲಾ ಅಗ್ನಿಶಾಮಕ ತುರ್ತು ಸೇವೆಗಳ ಘಟಕಕ್ಕೆ ಸೇರ್ಪಡೆಗೊಂಡಿದೆ. ಕಟ್ಟಡ ಕುಸಿದು ವ್ಯಕ್ತಿಗಳು ಅದರಡಿ ಸಿಕ್ಕಿ ಕೊಂಡಾಗ, ಅಪಘಾತ ಸಂಭವಿಸಿ ಸವಾರರ, ಪ್ರಯಾಣಿಕರ ದೇಹ ಅಥವಾ ಅಂಗಗಳು ವಾಹನದಡಿ ಸಿಲು ಕಿದಾಗ. ಕೆರೆ, ಬಾವಿಯಲ್ಲಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ರಕ್ಷಣೆ ಬೇಕಾಗಿರುವ ಎಲ್ಲ ಸಲಕರಣೆಗಳು ಈ ರಕ್ಷಣಾ ವಾಹನದಲ್ಲಿವೆ.ಕಟ್ಟಡ ಕುಸಿತದಂತಹ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಮೆಟಲ್ ಕಟರ್, ಎಲೆಕ್ಟ್ರಾನಿಕ್ ಗರಗಸ, ಕಾಂಕ್ರೀಟ್ ಕಟರ್. ಅನಾಹುತಗಳು ಇಕಟ್ಟಾಗಿರುವ ಅಥವಾ ಓಣಿಯಂತಹ ಪ್ರದೇಶದಲ್ಲಿ ಸಂಭವಿಸಿದ ಸಂದರ್ಭ ದಲ್ಲಿ ವಿದ್ಯುತ್ ಪೂರೈಸಲು ವಿಶೇಷ್ ಲೈಟ್‌ಗಳಿವೆ. ಸುಮಾರು ನೂರು ಅಡಿ ಉದ್ದದ ವೈರ್ ಮತ್ತು ಪೆಟ್ರೋಲ್ ಮೋಟರ್ ಸಹಾಯದಿಂದ ಉರಿ ಯುವ ಆಸ್ಕಾ ಲೈಟ್ ವಾಹನದಲ್ಲಿ  ಅಳವಡಿಸಲಾಗಿದೆ.ವಾಹನದ ಎರಡೂ ಬದಿಯಲ್ಲಿ ರ‌್ಯಾಕ್‌ಗಳನ್ನು ಮಾಡಿ ಸಲಕರಣೆಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ. ಕೆರೆ, ಬಾವಿಗಳಲ್ಲಿ ಜಾನುವಾರುಗಳು ಬಿದ್ದಾಗ ಅವುಗಳನ್ನು ರಕ್ಷಿಸಲು ಹಗ್ಗ, ಹಾರೆ, ಪಿಕಾಸು, ಕೊಡಲಿ, ಸುತ್ತಿಗೆ ವಾಹನ ದಲ್ಲಿಡಲಾಗಿದೆ. ನಾಲ್ಕು ರಿಚಾರ್ಜೆ ಬಲ್ ಬ್ಯಾಟರಿ, ಲೈಫ್‌ಬೊಯ್, ಲೈಫ್ ಜಾಕೆಟ್, 360 ಡಿಗ್ರಿ ಸುತ್ತುವ ಟೆಲಿ ಸ್ಕೋಪಿಕ್ ಲೈಟ್ ಸೌಲಭ್ಯ ಮಧ್ಯಮ ರಕ್ಷಣಾ ವಾಹನದಲ್ಲಿ ಸೇರಿದೆ.ಮನೆಗಳಲ್ಲಿ ಅನಾಹುತಗಳು ಸಂಭವಿ ಸಿದಾಗ ಬಾಗಿಲು ತೆಗೆಯಲು ಮತ್ತು ಅಪಘಾತ ನಡೆದಾಗ ಸವಾರರ ಅಥವಾ ಪ್ರಯಾಣಿಕರು ಸಿಕ್ಕಿಹಾಕಿ ಕೊಂಡರೆ ಅವರನ್ನು ರಕ್ಷಿಸಲು ಹೈಡ್ರಾ ಲಿಕ್ ಸ್ಟ್ರೆಡರ್. ತುರ್ತು ಸಂದರ್ಭದಲ್ಲಿ ಉಪಯೋಗಿಸಲು ಐದು ಕಿಲೋ ವಾಟ್ ಅಶ್ವಶಕ್ತಿಯ ಜನರೇಟರ್, ಅನಿಲ್ ಸೋರಿಕೆ ಆದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ನಾಲ್ಕು ಉಸಿರಾಟದ ಸಲಕರಣೆಗಳು. ಎರಡು ಟನ್ ಸಾಮರ್ಥ್ಯದ ಹೆಡ್ರಾಲಿಕ್ ವಿಂಚ್‌ಗಳನ್ನು ವಾಹನದಲ್ಲಿ ಅಳವಡಿ ಸಲಾಗಿದೆ. ಆದರೆ, ನೀರಿನ ಸೌಕರ್ಯ ಮಾತ್ರ ಈ ಮಧ್ಯಮ ರಕ್ಷಣಾ ವಾಹನದಲ್ಲಿಲ್ಲ.`ನೂತನ ವಾಹನ ತಿಂಗಳ ಹಿಂದಷ್ಟೇ ಘಟಕಕ್ಕೆ ಸೇರ್ಪಡೆ ಆಗಿದೆ. ವಾಹನ ದಲ್ಲಿರುವ ಸೌಲಭ್ಯ, ಸಲಕರಣೆಗಳನ್ನು ಹೇಗೆ ಪ್ರಯೋಗಿಸಬೇಕು ಎನ್ನುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಕಾರ್ಯ ಮುಗಿದ ನಂತರ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಗಳಿಗೆ ವಾಹನದ ಕುರಿತು ಮಾಹಿತಿ ನೀಡುವ ಯೋಚನೆ ಇದೆ~ ಎಂದು ಅಗ್ನಿಶಾಮಕ ಠಾಣಾಧಿಕಾರಿ ವಿನಾಯಕ ಹಟ್ಟೆಕರ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry