ಆಧುನಿಕ ಸೌಲಭ್ಯ: 9ನೇ ಸ್ಥಾನ

7

ಆಧುನಿಕ ಸೌಲಭ್ಯ: 9ನೇ ಸ್ಥಾನ

Published:
Updated:

ಬೆಂಗಳೂರು: ‘ಭಾರತ ನಾಗರಿಕ ವಿಮಾನಯಾನ ಆಧುನಿಕ ಸೌಲಭ್ಯದಿಂದ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಮಟ್ಟದಲ್ಲಿ 9 ನೇ ಸ್ಥಾನ ಪಡೆದುಕೊಂಡಿರುವುದು ಸಂತಸದ ವಿಚಾರ’ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಸಂಜಯ್‌ರೆಡ್ಡಿ ತಿಳಿಸಿದರು.ಭಾರತೀಯ ನಾಗರಿಕ ವಿಮಾನಯಾನ ಸಂಸ್ಥೆಯು ಶುಕ್ರವಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ, ‘ದೇಶದಲ್ಲಿರುವ ವಿಮಾನ ನಿಲ್ಧಾಣಗಳ ಮೂಲಸೌಕರ್ಯಗಳನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದೇವೆ’ ಎಂದು ಅವರು ತಿಳಿಸಿದರು.ನಾಗರಿಕ ವಿಮಾನಯಾನದ ಶತಮಾನೋತ್ಸವ ಚಿಹ್ನೆಯನ್ನು ಅನಾವರಣಗೊಳಿಸಲಾಯಿತು. ನಾಗರಿಕ ವಿಮಾನಯಾನದ ಶತಮಾನೋತ್ಸವ ಚಿಹ್ನೆಯನ್ನುಅನಾವರಣಗೊಳಿಸಲಾಯಿತು.ನಾಗರಿಕ ವಿಮಾನಯಾನ ಸಚಿವ ವಯಲಾರ ರವಿ ಅವರು ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry