ಆಧ್ಯಾತ್ಮಿಕ ಆಸಕ್ತಿ ಸಾಧನೆಗೆ ಪ್ರೇರಣೆ: ಶಾಮ ಭಟ್

ಗುರುವಾರ , ಜೂಲೈ 18, 2019
22 °C

ಆಧ್ಯಾತ್ಮಿಕ ಆಸಕ್ತಿ ಸಾಧನೆಗೆ ಪ್ರೇರಣೆ: ಶಾಮ ಭಟ್

Published:
Updated:

ಪುತ್ತೂರು: ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕದೆಡೆಗಿನ ಆಸಕ್ತಿಯೂ ಅಗತ್ಯ. ಇದರಿಂದ ಮನುಷ್ಯನ ಸಾಧನೆಗೆ ಪ್ರೇರಣೆ ದೊರೆಯುತ್ತದೆ. ಉದಾತ್ತ ಚಿಂತನೆ, ಸಾಧಿಸುವ ಹಠ ವಿದ್ಯಾರ್ಥಿಗಳಲ್ಲಿದ್ದಾಗ ಗಮ್ಯ ಸನಿಹವೆನಿಸುತ್ತದೆ ಎಂದು ಮೈಸೂರಿನ ಹಿಂದೂ ಸೇವಾ ಪ್ರತಿಷ್ಟಾನದ ನಿರ್ದೇಶಕ ಒ. ಶಾಮ ಭಟ್ ಹೇಳಿದರು.ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅವರು  ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ನಿಜವಾದ ರೆಬೆಲ್ ಸ್ಟಾರ್. ಅವರ ಚಿಂತನೆಗಳು ಸರ್ವರಿಗೂ ಪ್ರೇರಕ. ಅವರು ಧೀಮಂತ ವ್ಯಕ್ತಿತ್ವಕ್ಕೆ ಮಾದರಿಯಾಗಿರುವವರು ಎಂದ ಅವರು ವಿದ್ಯಾರ್ಥಿಗಳು ಸಾಧ್ಯತೆಗಳ ಅರಿವನ್ನು ಹೊಂದಿ ಸಾಧನೆಯೆಡೆಗೆ ಹೆಜ್ಜೆಯಿಡಬೇಕು ಎಂದು ಕರೆಯಿತ್ತರು.ಕಾಲೇಜಿನ ಹಿರಿಯ ವಿದ್ಯಾರ್ಥಿ, ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ.ಭಟ್ ಮುಖ್ಯ ಅತಿಥಿಯಾಗಿದ್ದರು. ನಮ್ಮ ವರ್ತನೆ, ವ್ಯವಹಾರ, ವ್ಯಕ್ತಿಗತ ಸಂಬಂಧ ಚೆನ್ನಾಗಿದ್ದಾಗ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ದೊರೆಯುತ್ತದೆ ಎಂದವರು ಹೇಳಿದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರಿನಿವಾಸ ಪೈ ಅಧ್ಯಕ್ಷತೆ ವಹಿಸಿದ್ದರು.  ಕುಕ್ಕೆ ಸುಬ್ರಹಣ್ಯ ಪ್ರಥಮ ದರ್ಜೆ ಕಾಜೇಜಿನ ಪ್ರಾಚಾರ್ಯ ಪ್ರೊ.ದಿನೇಶ್ ಕಾಮತ್ ಜಿ ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ವಿಕಸನ ಮಾಸ ಪತ್ರಿಕೆಯ ಚುನಾವಣಾ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರುಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ , ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಕೃಷ್ಣ ಕಾರಂತ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ.ವಿಘ್ನೇಶ್ವರ ವರ್ಮುಡಿ, ರವಿಕಲಾ, ಹರಿಣಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರವಣ್ ಭಂಡಾರ್ಕರ್, ಕಾರ್ಯದರ್ಶಿ ಅಭಿಷೇಕ್, ಜೊತೆ ಕಾರ್ಯದರ್ಶಿ ಸೃಜನಿ ರೈ,  ವಿದ್ಯಾರ್ಥಿನಿ ಚೈತ್ರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry