ಆಧ್ಯಾತ್ಮಿಕ ಮೌಲ್ಯಗಳ ಪ್ರಚಾರಕ್ಕೆ ಸಲಹೆ
ವಿಜಯಪುರ: (ಶ್ರೀ ಯೋಗಿ ನಾರೇಯಣ ಯತೀಂದ್ರರ ಮಂಟಪ) : ಸಾಮಾಜಿಕ ಶಾಂತಿಗಾಗಿ ಅಧ್ಯಾತ್ಮಿಕ ಮತ್ತು ಧಾರ್ಮಿಕ ಮೌಲ್ಯಗಳ ಪ್ರಚಾರ ಅಗತ್ಯ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಸಲಹೆ ನೀಡಿದರು.ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ನಗರ ಬಲಿಜ ಸಂಘ, ಕೈವಾರ ಯೋಗಿ ನಾರೇಯಣ ಯತೀಂದ್ರರ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ನಾರೇಯಣೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನೀಕತೆ ಸೋಗಿನಲ್ಲಿ ಧರ್ಮಶ್ರದ್ಧೆ ಕ್ಷೀಣಿಸುತ್ತಿದೆ. ಶಾಂತಿ, ಸೌಹಾರ್ದತೆ, ಭಾತೃತ್ವವನ್ನು ಪ್ರೇರೇಪಿಸಬಲ್ಲ ಶಕ್ತಿ ಧರ್ಮಕ್ಕಿದೆ ಎಂದು ವಿವರಿಸಿದರು.ಶಾಸಕ ಕೆ.ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಉಳಿವು ಯುವಪೀಳಿಗೆಯ ಕೈಯಲ್ಲಿದೆ. ಜಪಾನ್ನಲ್ಲಿ ನಡೆದ ಸುನಾಮಿ ದುರಂತಕ್ಕೆ ಎಲ್ಲ ಭಾರತೀಯ ಕರುಳು ಕರಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೈವಾರದ ಯೋಗಿನಾರೇಯಣ ಯತೀಂದ್ರ ಟ್ರಸ್ಟ್ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಮಾತನಾಡಿ, ಕೈವಾರ ತಾತಯ್ಯನವರ ಆದರ್ಶ, ಮೌಲ್ಯಗಳು ಅನುಕರಣೀಯ. ದಾರ್ಶನಿಕರ ಸಂದೇಶಗಳ ಸಮಾಜಕ್ಕೆ ಪ್ರಸಾರವಾಗಬೇಕಿದೆ ಎಂದರು.ಸಂಕೀರ್ತನಾ ಸಂಯೋಜಕ ಬಾಲಕೃಷ್ಣಭಾಗವತರ್ ಕೈವಾರ ತಾತಯ್ಯ ಮತ್ತು ವಿಜಯಪುರ ಪಟ್ಟಣದ ಸಂಬಂಧವನ್ನು ಕೀರ್ತನೆಗಳೊಂದಿಗೆ ವಿವರಿಸಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ನಗರ ಬಲಿಜ ಸಂಘದ ಅಧ್ಯಕ್ಷ ಆರ್.ವೇಣುಗೋಪಾಲ್, ಉಪಾಧ್ಯಕ್ಷ ವೆಂಕಟೇಶಪ್ಪ, ಪುರಸಭಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಎಂ.ಎಲ್.ಕೃಷ್ಣಪ್ಪಗೌಡ, ಪುರಸಭೆ ಸದಸ್ಯರು, ತಾ.ಪಂ. ಅಧ್ಯಕ್ಷ ಬಿ.ಕೆ.ಶಿವಪ್ಪ, ವಿಭಾಕರರೆಡ್ಡಿ, ಕರ್ನಾಟಕ ಬಲಿಜಸಂಘದ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರ ಬಲಿಜಸಂಘದ ಪದಾಧಿಕಾರಿಗಳು ಇದ್ದರು. ವೇದಮಂತ್ರ ಘೋಷದ ನಂತರ ಟಿ.ಮಹಾತ್ಮಾಂಜನೇಯ ಪ್ರಾರ್ಥಿಸಿದರು. ಆರ್.ಮುನಿರಾಜು ಸ್ವಾಗತಿಸಿದರು. ಟಿ.ಎಲ್.ಆನಂದ್ ನಿರೂಪಿಸಿದರು. ಈ ಸಂದರ್ಭದಲ್ಲಿ ಜಪಾನ್ನಲ್ಲಿ ನಡೆದ ದುರಂತಕ್ಕೆ ಸಿಲುಕಿದವರಿಗಾಗಿ ಮೌನ ಆಚರಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.