ಶುಕ್ರವಾರ, ಅಕ್ಟೋಬರ್ 18, 2019
27 °C

ಆಧ್ಯಾತ್ಮಿಕ ವಿಚಾರ ಅಳವಡಿಸಿಕೊಳ್ಳಿ

Published:
Updated:

ಘಟಪ್ರಭಾ (ಗೋಕಾಕ): `ಆಧ್ಯಾತ್ಮದ ಆಚಾರ -ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡರೆ  ಜೀವನ ಪಾವನವಾಗುತ್ತದೆ~ ಎಂದು ವಿಜಾಪುರ ಷಣ್ಮುಖಾರೂಢಮಠದ ಅಭಿನವ ಶಿವಪುತ್ರ ಸ್ವಾಮೀಜಿ ನುಡಿದರು.ಮಂಗಳವಾರ ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ  ಕೈವಲ್ಯಾಶ್ರಮದಲ್ಲಿ ಸತ್ಸಂಗ ಸಮ್ಮೇಳನದ ಸಮಾರೋಪದಲ್ಲಿ ತತ್ವ ಚಿಂತನೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಇಂತಹ ಧಾರ್ಮಿಕ ಕಾರ್ಯದಲ್ಲಿ ಎಲ್ಲ ಮಹಾತ್ಮರನ್ನು ಒಂದೇ ಕಡೆಗೆ ಸೇರಿಸುವಂತೆ ಮಾಡುತ್ತಿರುವ ನಿಜಗುಣ ದೇವರು ಕಾರ್ಯ ಶ್ಲಾಘನೀಯ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ, ಜಿ.ಪಂ ಅಧ್ಯಕ್ಷ ಈರಣ್ಣ ಕಡಾಡಿ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜೇರಿ,  ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ ಹಾಗೂ ಬಿ.ಸಿ. ಸರಿಕರ, ಪರಪ್ಪಣ್ಣ ಸವದಿ, ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಡಾ. ರಾಜೇಂದ್ರ ಸಣ್ಣಕ್ಕಿ, ಶಂಕರ ಬಿಲಕುಂದಿ, ಸುಧೀರ ಜೋಡಟ್ಟಿ, ವಿಠ್ಠಲ ಸವದತ್ತಿ, ಕೆ.ಬಿ. ಸಣ್ಣಕ್ಕಿ, ಎಂ.ಟಿ.ದೊಡಮನಿ, ಎಂ.ಸಿ ಚಿತ್ರಾಳೆ, ಮಹಾಂತೇಶ ಶಾಸ್ತ್ರೀ, ಈಶ್ವರ ಕತ್ತಿ  ಹಾಗೂ ಹಲವು ಗಣ್ಯರನ್ನು  ಸನ್ಮಾನಿಸಲಾಯಿತು.ಶ್ರಿಮಠದ ವತಿಯಿಂದ ಶ್ರಿ ಸಿದ್ಧಲಿಂಗ ಸದ್ಭಾವನಾ ಪ್ರಶಸ್ತಿಯನ್ನು ಚಲನಚಿತ್ರ ನಟ ನಿರ್ದೇಶಕ ರಾಧಾಕೃಷ್ಣನ್, ಮುಕ್ತಾರ ಪಠಾಣ, ಶಿವಯೋಗಿ ಕಂಬಾಳಿಮಠ ಹಾಗೂ ಡಾ. ವಿರೂಪಾಕ್ಷ ಪತ್ತಾರ ಅವರಿಗೆ ನೀಡಿ ಗೌರವಿಸಲಾಯಿತು.ನಿಜಗುಣ ದೇವರ 50ನೇ ಜನ್ಮ ದಿನೋತ್ಸವ ಸುವರ್ಣ ಸಂಭ್ರಮದಲ್ಲಿ ನಿಜಗುಣ ದೇವರು ಬರೆದ  `ಭಾರತಕ್ಕೊಬ್ಬ ಭಾರತೀಶ~  ಎಂಬ ಗ್ರಂಥವನ್ನು ಡಾ. ಶಿವಾನಂದ ಭಾರತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.ನಿಡಸೋಸಿ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಬೆಂಗಳೂರಿನ ಗೋಸಾಯಿಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ರುದ್ರಾಕ್ಷಿಮಠ ನಾಗನೂರ ಸಿದ್ಧರಾಮ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post Comments (+)