ಆನಂದ್‌ ಮೇಲೆ ಭರವಸೆ

7
ಬ್ಯಾಡ್ಮಿಂಟನ್‌: ಇಂದಿನಿಂದ ಚೀನಾ ಮಾಸ್ಟರ್ಸ್‌ ಟೂರ್ನಿ

ಆನಂದ್‌ ಮೇಲೆ ಭರವಸೆ

Published:
Updated:

ನವದೆಹಲಿ (ಪಿಟಿಐ): ಭರವಸೆಯ ಆಟಗಾರರೆನಿಸಿರುವ ಅಜಯ್‌ ಜಯರಾಮ್‌ ಮತ್ತು ಆನಂದ್‌ ಪವಾರ್‌ ಬುಧವಾರ ಚೀನಾದ ಗುವಾಂಗ್‌ ಜೌನಲ್ಲಿ ಆರಂಭವಾಗಲಿರುವ ಚೀನಾ ಮಾಸ್ಟರ್‌್ಸ ಬ್ಯಾಡ್ಮಿಂಟನ್‌ ಸೂಪರ್‌ ಸರಣಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.ವಿಶ್ವ ರಾ್ಯಂಕ್‌ನಲ್ಲಿ 24 ಸ್ಥಾನ ಹೊಂದಿರುವ ಜಯರಾಮ್‌ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈ ಆಟಗಾರ ಮೊದಲ ಸುತ್ತಿನಲ್ಲಿ ಆತಿಥೇಯ ರಾಷ್ಟ್ರದ ಚೆನ್‌ ಯುಕೇನ್‌ ಎದುರು ಹೋರಾಡಲಿದ್ದಾರೆ. ಪವಾರ್‌ ಅಗ್ರ ಶ್ರೇಯಾಂಕ ಹೊಂದಿರುವ ಚೆಂಗ್‌ ಲಾಂಗ್‌ ಸವಾಲನ್ನು ಎದುರಿಸಲಿದ್ದಾರೆ. ಪವಾರ್‌ ವಿಶ್ವ ರಾ್ಯಂಕ್‌ನಲ್ಲಿ 39ನೇ ಸ್ಥಾನದಲ್ಲಿದ್ದಾರೆ.ಮುಂಬೈ ಮೂಲದ ಅಜಯ್‌ ಐಬಿಎಲ್‌ನಲ್ಲಿ ಹೈದರಾಬಾದ್‌ ಹಾಟ್‌ಷಾಟ್ಸ್‌ ತಂಡದಲ್ಲಿ ಆಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು 13 ರಾ್ಯಂಕ್‌ನಲ್ಲಿರುವ ವಿಂಗ್‌ ಕೀ ವೊಂಗ್‌ ಎದುರು ಗೆಲುವು ಸಾಧಿಸಿದ್ದರು.ಐಬಿಎಲ್‌ನಲ್ಲಿ 5ನೇ ರಾ್ಯಂಕ್‌ನ ವಿಯೆಟ್ನಾಂನ ಟಿನ್‌ ಮಿನ್‌ ನುಯೆನ್‌ ಎದುರು ಎರಡು ಸಲ ಗೆಲುವು ಪಡೆದಿದ್ದರು. ಆದ್ದರಿಂದ ಭಾರತದ ಆಟಗಾರನ ವಿಶ್ವಾಸ ಹೆಚ್ಚಾಗಿದೆ. ಆದ್ದರಿಂದ ಅಜಯ್‌ ಉತ್ತಮ ಪ್ರದರ್ಶನ ತೋರುವ ಭರವಸೆ ಮೂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry