ಆನಂದ್ ಕುಮಾರ್‌ಗೆ ಕೆನಡಾದಲ್ಲಿ ಸನ್ಮಾನ

7

ಆನಂದ್ ಕುಮಾರ್‌ಗೆ ಕೆನಡಾದಲ್ಲಿ ಸನ್ಮಾನ

Published:
Updated:

ಟೊರಾಂಟೊ (ಪಿಟಿಐ): ದಮನಿತ ವರ್ಗಕ್ಕೆ ಸೇರಿದ 30 ಮಕ್ಕಳಿಗೆ ಉಚಿತ ತರಬೇತಿ ನೀಡಿ ಅವರನ್ನು ಐಐಟಿ ಪರೀಕ್ಷೆಗೆ ಸಜ್ಜುಗೊಳಿಸುವ ಬಿಹಾರದ ಆನಂದ್ ಕುಮಾರ್ ಅವರನ್ನು ಕೆನಡಾದಲ್ಲಿ ಸನ್ಮಾನಿಸಲಾಗಿದೆ.ವ್ಯಾಂಕೊವರ್‌ನ ದಕ್ಷಿಣ ಸಾಂಸ್ಕೃತಿಕ ಸಂಘವು ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಜನಪ್ರತಿನಿಧಿ ಮಾರ್ಕ್ ಡಾಲ್ಟನ್ ಅವರು ಈ ಸಂದರ್ಭದಲ್ಲಿ ಮಾತನಾಡಿ `ಆನಂದ್‌ಕುಮಾರ್ ಕೆಲಸ ಎಲ್ಲ ಶಿಕ್ಷಕರಿಗೂ ಸ್ಫೂರ್ತಿ ಹುಟ್ಟಿಸುವಂತಿದೆ. ಅವರು ಗೌರವಕ್ಕೆ ಅರ್ಹರು~ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry