ಆನೆ, ಒಂಟೆ ಸಾಗಾಟ: ಪ್ರಕರಣ ದಾಖಲು

7

ಆನೆ, ಒಂಟೆ ಸಾಗಾಟ: ಪ್ರಕರಣ ದಾಖಲು

Published:
Updated:

ಬೆಂಗಳೂರು: ಗೃಹಪ್ರವೇಶಕ್ಕಾಗಿ ಒಂಟೆ ಮತ್ತು ಆನೆಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿದ್ದಾರೆ.ಮಾವುತ ಇಸ್ಮಾಯಿಲ್‌ ಮತ್ತು ಆತನ ಸಹಾಯಕ ಅಶೋಕ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್‌­ನಿಂದ ಒಂಟೆಯನ್ನು ಮತ್ತು ಚಿತ್ರ­ದುರ್ಗದ ತರಳ­ಬಾಳು ಮಠದಿಂದ ಆನೆ­ಯನ್ನು ನಗರಕ್ಕೆ ಕರೆತಂದು ದೇವನ­ಹಳ್ಳಿಯ ಸ್ಟೋನ್‌ಹಿಲ್‌ ಶಾಲೆಯ ಬಳಿ ಕಟ್ಟಲಾಗಿತ್ತು ಎಂದು ಸಿಐಡಿ ಅಧಿಕಾರಿ­ಗಳು ತಿಳಿಸಿದ್ದಾರೆ.ದೇವನಹಳ್ಳಿಯಲ್ಲಿರುವ ಎಂಬೆಸ್ಸಿ ಗ್ರೂಪ್‌ ಮಾಲೀಕ ಜಿತೇಂದ್ರ ನಿರ್ವಾಣಿ ಅವರ ಮನೆಯ ಗೃಹ ಪ್ರವೇಶಕ್ಕೆ ಒಂಟೆ, ಆನೆಯನ್ನು ತರಲಾಗಿತ್ತು ಎಂದು ಇಸ್ಮಾಯಿಲ್‌ ಮತ್ತು ಅಶೋಕ್‌ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry