ಸೋಮವಾರ, ಮೇ 17, 2021
21 °C

ಆನೆ ಕಾರಿಡಾರ್: ಎಲ್ಲಿಂದ ಎಲ್ಲಿವರೆಗೆ...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನೆಗಳು ಸಂಚರಿಸುವ ಸ್ವಾಭಾವಿಕ ಮಾರ್ಗವನ್ನು ಆನೆ ಕಾರಿಡಾರ್ ಎಂದು ಗುರುತಿಸಲಾಗುತ್ತದೆ. ಆನೆಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಈ ಮಾರ್ಗಗಳ ಮೂಲಕವೇ ಸಂಚರಿಸುವುದು ರೂಢಿ. ಆನೆ ಕಾರಿಡಾರ್ ಪ್ರದೇಶದಲ್ಲಿ ಮಾನವನ ಚಟುವಟಿಕೆಗಳಿಂದ ಉಂಟಾಗುವ ಅಡ್ಡಿಗಳಿಂದ ಆನೆಗಳು ತಮ್ಮ ಸಹಜ ಮಾರ್ಗವನ್ನು ಬದಲಿಸುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.ದಕ್ಷಿಣ ಭಾರತದಲ್ಲಿ ಆನೆ ಕಾರಿಡಾರ್ ತಮಿಳುನಾಡು, ಕೇರಳ ಹಾಗೂ ರಾಜ್ಯದ ಪಶ್ಚಿಮ ಘಟ್ಟಗಳ ಅಂಚಿನವರೆಗೂ ವಿಸ್ತರಿಸಿಕೊಂಡಿದೆ. ರಾಜ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶ ಆರಂಭಗೊಳ್ಳುವ ಮಹದೇಶ್ವರ ರಾಜ್ಯ ಅರಣ್ಯ ಪ್ರದೇಶದಿಂದ ಆನೆ ಕಾರಿಡಾರ್ ಪ್ರಾರಂಭವಾಗುತ್ತದೆ. ಇದಕ್ಕೂ ಮೊದಲಿನ ತಮಿಳುನಾಡಿನ ತಳಿ - ತಂಡಾ ಅರಣ್ಯ ಪ್ರದೇಶವು ರಾಜ್ಯಕ್ಕೆ ಆನೆಗಳು ಪ್ರವೇಶಿಸುವ ಆರಂಭದ ಮಾರ್ಗವಾಗಿದೆ.ರಾಜ್ಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕನಕಪುರ ಅರಣ್ಯ ವಲಯ, ಕರಡಿಕಲ್, ಮಹದೇಶ್ವರ ರಾಜ್ಯ ಅರಣ್ಯ ಪ್ರದೇಶ, ಕೊಳ್ಳೇಗಾಲದ ಬಿಳಿಗಿರಿರಂಗನ ದೇವಾಲಯ ವನ್ಯಜೀವಿ ಪ್ರದೇಶ, ಪುಣಜೂರು - ಕೋಳಿಪಾಳ್ಯ ಆನೆ ಕಾರಿಡಾರ್‌ಗಳ ಮೂಲಕ ಆನೆಗಳ ಸಂಚಾರ ಹೆಚ್ಚಾಗಿರುತ್ತದೆ.ಮುಂದೆ ಕೇರಳದ ವೈನಾಡಿನ ಉತ್ತರ ಭಾಗ, ಬ್ರಹ್ಮಗಿರಿ ಅರಣ್ಯ ಪ್ರದೇಶದ ಆನೆ ಕಾರಿಡಾರ್‌ಗಳಲ್ಲಿ ಹೆಚ್ಚು ಆನೆಗಳು ಸಂಚರಿಸುತ್ತವೆ ಎಂದು ವನ್ಯಜೀವಿ ತಜ್ಞರು ಗುರುತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.