ಆನೆ ಗಣತಿ ಕಾರ್ಯಕ್ಕೆ ಚಾಲನೆ

7

ಆನೆ ಗಣತಿ ಕಾರ್ಯಕ್ಕೆ ಚಾಲನೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ, ಕೊಪ್ಪ ವಿಭಾಗ ಮತ್ತು ಭದ್ರಾ ವನ್ಯಜೀವಿ ವಿಭಾಗದಲ್ಲಿ ಆನೆಗಳ ಗಣತಿ ಮಂಗಳವಾರ ಆರಂಭವಾಯಿತು. ಗಣತಿ ಕಾರ್ಯದಲ್ಲಿ ಅರಣ್ಯ ಇಲಾ ಖೆಯ ಅಧಿಕಾರಿಗಳು, ಗಾರ್ಡ್‌ಗಳು, ವೀಕ್ಷಕರು ಅಲ್ಲದೆ ಎನ್‌ಜಿಒ ಮತ್ತು ಸ್ವಯಂಸೇವ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದಾರೆ.ಮೊದಲ ದಿನ ನಿರ್ದಿಷ್ಟ ಪ್ರದೇಶ ದಲ್ಲಿ ಆನೆಗಳ ಗಣತಿ ನಡೆಯಿತು. ಎರಡನೇ ದಿನ ಆನೆಗಳ ಲದ್ದಿ ಆಧರಿಸಿ ಗಣತಿ ನಡೆಯಲಿದ್ದು, ಮೂರನೇ ದಿನ ನೀರಿನ ಗುಂಡಿ, ಕೆರೆ, ಹಳ್ಳ ಮತ್ತಿತರ ಸ್ಥಳಗಳಲ್ಲಿ ಗಣತಿ ಕಾರ್ಯ ನಡೆಯಲಿದೆ.ಚಿಕ್ಕಮಗಳೂರು ಅರಣ್ಯ ವಿಭಾ ಗದ 5 ವಲಯಗಳಲ್ಲಿ, ಕೊಪ್ಪ ವಿಭಾಗದ 8 ವಲಯಗಳಲ್ಲಿ ಹಾಗೂ ಭದ್ರಾ ವನ್ಯಜೀವಿ ವಿಭಾಗದ ವಲಯಗಳಲ್ಲಿ ಆನೆ ಗಣತಿ ಕಾರ್ಯ ನಡೆಯುತ್ತಿದೆ. ಭದ್ರಾ ವನ್ಯಜೀವಿ ವಿಭಾ ಗದಲ್ಲಿ ಲಕ್ಕವಳ್ಳಿಯಲ್ಲಿ 8 ತಂಡ, ತಣಿಗೆಬೈಲು ವಲಯದಲ್ಲಿ 6, ಮುತ್ತೋಡಿ ವಲಯದಲ್ಲಿ 7 ಹಾಗೂ ಹೆಬ್ಬೆ ವಲಯದಲ್ಲಿ 5 ತಂಡಗಳು ಗಣತಿ ಕಾರ್ಯದಲ್ಲಿ ತೊಡಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry