ಆನೆ ದಂತ ಕಳ್ಳಬೇಟೆ: ಪ್ರತಿಭಟನೆ

ನ್ಯೂಯಾರ್ಕ್ (ಎಎಫ್ಪಿ): ದಂತಕ್ಕಾಗಿ ನಡೆಯುವ ಆನೆಗಳ ಕಳ್ಳ ಬೇಟೆಯನ್ನು ವಿರೋಧಿಸಿ ಇಲ್ಲಿನ ಟೈಮ್ಸ್ಕ್ವೇರ್ನಲ್ಲಿ ಟನ್ಗಟ್ಟಲೆ ಅಕ್ರಮ ದಂತದ ಅಲಂಕಾರಿಕ ವಸ್ತುಗಳನ್ನು ಶನಿವಾರ ನಾಶಪಡಿಸಲಾಯಿತು.
ಪ್ರತಿವರ್ಷ ಆನೆಗಳ ಕಳ್ಳಬೇಟೆ ಹೆಚ್ಚುತ್ತಿರುವುದನ್ನು ಈ ಸಂದರ್ಭದಲ್ಲಿ ಖಂಡಿಸಲಾಯಿತು. ಜೈಲಿನಲ್ಲಿರುವ ವ್ಯಾಪಾರಿಯಿಂದ ವಶಪಡಿಸಿಕೊಂಡಿರುವ ದಂತದ ವಸ್ತುಗಳನ್ನು ಟೈಮ್ಸ್ಕ್ವೇರ್ನಲ್ಲಿ ನಿಯೋನ್ ದೀಪಗಳ ಬೆಳಕಿನಲ್ಲಿ ಸಾಲಾಗಿ ಜೋಡಿಸಿ ಬಳಿಕ ನಾಶಪಡಿಸಲಾಯಿತು.
‘ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ಸಹಿಸುವುದಿಲ್ಲ’ ಎಂದು ಅಮೆರಿಕದ ಒಳಾಡಳಿತ ಇಲಾಖೆಯ ಕಾರ್ಯದರ್ಶಿ ಸ್ಯಾಲೆ ಜೆವೆಲ್ ತಿಳಿಸಿದ್ದಾರೆ.
‘2011 - 2014ರ ಅವಧಿಯಲ್ಲಿ ಆಫ್ರಿಕನ್ ಆನೆಗಳ ಕಳ್ಳಬೇಟೆ ದಾಖಲೆ ಮಟ್ಟದಲ್ಲಿ ನಡೆದಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ದಂತಕ್ಕಾಗಿ ಸುಮಾರು ಒಂದು ಲಕ್ಷ ಆನೆಗಳನ್ನು ಕೊಲ್ಲಲಾಗಿದೆ’ ಎಂದು ತಿಳಿಸಿದ್ದಾರೆ.
‘ಕಡಿಮೆ ಅಪಾಯ, ಹೆಚ್ಚು ಲಾಭ ಹೊಂದಿದ ವ್ಯವಹಾರ ಇದಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆನೆ ದಂತಕ್ಕೆ ಹೆಚ್ಚು ಬೇಡಿಕೆಯಿದೆ’ ಎಂದು ಅವರು ತಿಳಿಸಿದ್ದಾರೆ.
‘ದಂತಬೇಟೆಯ ಕಳ್ಳ ವ್ಯವಹಾರದಿಂದಾಗಿ ಪ್ರತಿ ದಿನ 96 ಆನೆಗಳು ಬಲಿಯಾಗುತ್ತಿವೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.