ಆನೆ ದಂತ ವಶ: ಮೂವರ ಬಂಧನ

7

ಆನೆ ದಂತ ವಶ: ಮೂವರ ಬಂಧನ

Published:
Updated:

ಸೋಮವಾರಪೇಟೆ: ಅಡಗಿಸಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಆನೆ ದಂತಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.ನಗರದ ಬಾಣಾವರ ರಸ್ತೆ ನಿವಾಸಿ ಸೋಮಶೇಖರ, ತೋಳೂರುಶೆಟ್ಟಳ್ಳಿಯ ಕೀರ್ತಿ ಹಾಗೂ ಬ್ರಹ್ಮಾವರದ ಮನೋಹರ್ ಎಂಬುವವರೇ ಬಂಧಿತರು.ಸೋಮಶೇಖರ್ ಮನೆಗೆ ದಂತಗಳನ್ನು ಖರೀದಿಸುವವರಂತೆ ಹೋದ ಅರಣ್ಯ ಇಲಾಖೆ ಅಧಿಕಾರಿಗಳು, ಮಾಲು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದರು. ಮನೆಯ ಒಳಗಿದ್ದ ಇನ್ನೂ ಇಬ್ಬರು ಪರಾರಿಯಾದರು.

 

48 ಕೆ.ಜಿ. ತೂಕವಿರುವ ದಂತ ರೂ 1.50 ಕೋಟಿ ಬೆಲೆ ಬಾಳುತ್ತದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಿಐಡಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry