ಆನೆ ದಾಳಿ: ಬೆಳೆ ನಾಶ

7

ಆನೆ ದಾಳಿ: ಬೆಳೆ ನಾಶ

Published:
Updated:

ಮಾಗಡಿ: ತಾಲ್ಲೂಕಿನ ಗುಡ್ಡಹಳ್ಳಿ ಬಳಿ ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಭಾರಿ ಹಾನಿ ಉಂಟು ಮಾಡಿವೆ.ಕಾಳು, ಕಡ್ಡಿ ಬೇರ್ಪಡಿಸಲು ಹಾಕಿದ್ದ ತೆನೆಭರಿತ ರಾಗಿ ಮೆದೆಯನ್ನು ಒಂಬತ್ತು ಆನೆಗಳ ಹಿಂಡು ದಾಳಿ ಮಾಡಿ ನಾಶಪಡಿಸಿವೆ.ಸಾವನದುರ್ಗದ ಅಭಯಾರಣ್ಯದ ತಪ್ಪಲಿನಲ್ಲಿರುವ ಗುಡ್ಡಹಳ್ಳಿಯಲ್ಲಿ ರುವ ರೈತರ ರಾಗಿ ಮೆದೆ, ಹಲಸಿನ ಮರಗಳು, ಪಪ್ಪಾಯಿ, ಸಪೋಟ ತೋಟ, ಅಡಿಕೆ, ತೆಂಗಿನ ಮರಗಳು ಆನೆಗಳ ದಾಳಿಗೆ ತುತ್ತಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ರಾಮಣ್ಣ, ಸಾಸಲಪ್ಪ, ನರಸಿಂಹಯ್ಯನ ಮಗ ರಾಮಯ್ಯ, ಬೆಟ್ಟಯ್ಯ, ಕೆಂಪಯ್ಯ, ರಂಗಯ್ಯ, ಕುಳ್ಳಯ್ಯ, ರಂಗಣ್ಣ, ಲೋಕೇಶ, ತಿಮ್ಮೇಗೌಡ ಅವರಿಗೆ ಸೇರಿರುವ ಬೆಳೆ ನಾಶವಾಗಿದೆ.ಜಿಲ್ಲಾಡಳಿತ ತಕ್ಷಣ ರೈತರ ನೆರವಿಗೆ ಮುಂದಾಗಬೇಕು ಎಂದು ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ, ತಿಮ್ಮೇ ಗೌಡ, ಲೋಕೇಶ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry