ಆನೆ ದಾಳಿ: ಮಹಿಳೆ ಸಾವು

7

ಆನೆ ದಾಳಿ: ಮಹಿಳೆ ಸಾವು

Published:
Updated:

ಆಲೂರು: ಕಾಡಾನೆ ದಾಳಿಗೆ ತಾಲ್ಲೂ­ಕಿ­ನ ಕೆ.ಹೊಸಕೋಟೆ ಹೋಬ­ಳಿಯ ಪುರಬೈರವನಹಳ್ಳಿಯ ಸರೋಜಮ್ಮ (54) ಮೃತಪಟ್ಟ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.ಸರೋಜಮ್ಮ ಬೆಳಿಗ್ಗೆ ಬಹಿರ್ದೆಸೆ­ಗೆಂದು ಹಿತ್ತಲಿಗೆ ಹೋಗುತ್ತಿದ್ದಾಗ ತೋಟ­ದಲ್ಲಿದ್ದ ಆನೆ ಬೆನ್ನಟ್ಟಿ ಬಂದಿದೆ. ಮನೆಯ ಸಮೀಪ ದ ಮೋರಿ ಬಳಿ ಸರೋಜಮ್ಮ  ಎಡವಿ ಬಿದ್ದಿದ್ದಾರೆ. ಆನೆ ಅಲ್ಲಿಯೇ ಕಾಲಿ­ನಿಂದ ಹೊಸಕಿ ಅವರನ್ನು ಸಾಯಿ­ಸಿದೆ.ಘಟನೆ ಬೆಳಿಗ್ಗೆ ನಡೆದಿದ್ದರೂ ಮಧ್ಯಾಹ್ನ 2 ಗಂಟೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಾರದಿರುವು­ದಕ್ಕೆ ಆಕ್ರೋ­ಶ­ಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry