ಆನೆ ಬಂತು ಆನೆ

ಬುಧವಾರ, ಜೂಲೈ 24, 2019
27 °C

ಆನೆ ಬಂತು ಆನೆ

Published:
Updated:

ಆನೆ ಬಂತು ಆನೆ!

ಯಾವೂರ ಆನೆ?

ಕಾಡಿನ ಆನೆ!

ಎಲ್ಲಿಗೆ ಬಂತು?

ಮೈಸೂರಿಗೆ ಬಂತು!

ಮೈಸೂರಿಗೇಕೆ ಬಂತು?

ಕಾಡಿನಲ್ಲಿ ನೆಲೆ ಇಲ್ಲದಕ್ಕೆ ಬಂತು!

ಏನು ಸಂದೇಶ ಹೊತ್ತು ಬಂತು?

 `ಏ ದುಷ್ಟ ಜನಗಳೆ

ಕಾನನವನ್ನೆಲ್ಲ ಖನನ ಮಾಡಿ

ನಮ್ಮ ನೆಮ್ಮದಿಯ ನಿಸರ್ಗದಲ್ಲಿ

ನಿಮ್ಮ ಆಡಂಬರದ

ಸೌಧ ನಿರ್ಮಿಸಿದ್ದೀರಿ

ಇನ್ನೆಲ್ಲಿ ನಮಗೆ ಉಳಿಗಾಲ~

ಎಂದು ದಾಂಧಲೆಗೆ ನಿಂತಿತು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry