ಭಾನುವಾರ, ನವೆಂಬರ್ 17, 2019
29 °C

ಆನೆ ಹಿಂಡು ದಾಳಿ: ಜೋಳದ ಬೆಳೆ ನಾಶ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿ ಹೊಸಪುರ ಗ್ರಾಮದ ರೈತ ಮಹಾದೇವೇಗೌಡ ಎಂಬುವವರ ಜಮೀನಿಗೆ ಕಾಡಾನೆಗಳ ಹಿಂಡು ಗುರುವಾರ ರಾತ್ರಿ ದಾಳಿ ನಡೆಸಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಜೋಳದ ಬೆಳೆ ನಾಶವಾಗಿದೆ.ಓಂಕಾರ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ರಾತ್ರಿ ಮಹಾದೇವೇಗೌಡ ಎಂಬ ರೈತರ ಜಮೀನಿನಲ್ಲಿ ವಾಸ್ತವ್ಯ ಹೂಡಿ ಜೋಳದ ಬೆಳೆ ನಾಶಪಡಿಸಿವೆ.ಕಾಡಾನೆಗಳು ಬೇಗೂರು ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ದಾಳಿ ನಡೆಸಿ ವಿವಿಧ ಬೆಳೆಗಳನ್ನು ನಾಶ ಪಡಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಈ ಬಾರಿ ಮುಂಗಾರು ಮಳೆಯೂ ವಿಫಲವಾಗಿದ್ದು, ಅಲ್ಪ ಸ್ವಲ್ಪ ಬೆಳೆದ ಬೆಳೆ ಕೈ ಸೇರುವ ಮುನ್ನವೇ  ಈ ರೀತಿ ಕಾಡು ಮೃಗಗಳ ಪಾಲಾಗುತ್ತಿದ್ದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರವನ್ನು ಅತಿ ಶೀಘ್ರವಾಗಿ ಕೊಡಿಸಿ ಕೊಡ ಬೇಕೆಂದು ರೈತರು ಒತ್ತಾಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)