ಶುಕ್ರವಾರ, ನವೆಂಬರ್ 22, 2019
23 °C

ಆನ್‌ಲೈನ್‌ನಲ್ಲಿ ಆರ್‌ಟಿಐ ಅರ್ಜಿ

Published:
Updated:

ನವದೆಹಲಿ (ಪಿಟಿಐ): ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಮಾಹಿತಿ ಪಡೆಯುವ ಹಕ್ಕು (ಆರ್‌ಟಿಐ) ಅರ್ಜಿ ಹಾಗೂ ಅಗತ್ಯ ಶುಲ್ಕವನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.www.rtionline.gov.in  ಈ ವೆಬ್‌ಸೈಟ್‌ನಲ್ಲಿ ಆರ್‌ಟಿಐಗೆ ಸಂಬಂಧಿಸಿದ ಮಾಹಿತಿ ಪಡೆದು  ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಅಧಿಕಾರಿಗಳು ತಿಳಿಸಿದ್ದಾರೆ.ಮಾಹಿತಿ ಪಡೆಯಬಯಸುವ ವ್ಯಕ್ತಿಗಳು ಶುಲ್ಕವಾಗಿ ್ಙ 10 ಅನ್ನು ಎಸ್‌ಬಿಐ ಹಾಗೂ ಅದರ ಸಹವರ್ತಿ ಬ್ಯಾಂಕ್‌ಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಸಂದಾಯ ಮಾಡಬಹುದಾಗಿದೆ.

ಪ್ರತಿಕ್ರಿಯಿಸಿ (+)