ಆನ್‌ಲೈನ್‌ನಲ್ಲಿ `ಪಿಎಫ್' ಖಾತೆ ಮಾಹಿತಿ

7

ಆನ್‌ಲೈನ್‌ನಲ್ಲಿ `ಪಿಎಫ್' ಖಾತೆ ಮಾಹಿತಿ

Published:
Updated:

ನವದೆಹಲಿ (ಪಿಟಿಐ): ಭವಿಷ್ಯ ನಿಧಿ ಚಂದಾದಾರರು ತಮ್ಮ  ಖಾತೆಯ ವಿವರಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ನೋಡಬಹುದು. ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸೆ.6ರಿಂದ ಈ ಸೌಲಭ್ಯ ಜಾರಿಗೆ ತರಲಿದೆ.5 ಕೋಟಿಗಿಂತಲೂ ಹೆಚ್ಚಿರುವ ಭವಿಷ್ಯ ನಿಧಿ ಚಂದಾದಾರರಿಗೆ ಈ ಸೌಲಭ್ಯ ಲಭಿಸಲಿದೆ. ಚಂದಾದಾರರು ಕ್ಷಣ ಕ್ಷಣದ ಪರಿಷ್ಕೃತ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಡಬಹುದು ಎಂದು ಕೇಂದ್ರ  ಭವಿಷ್ಯ ನಿಧಿ ಆಯುಕ್ತ ಕೆ.ಕೆ.ಜಲನ್ ಗುರುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.ಸದ್ಯ `ಪಿಎಫ್' ಚಂದಾದಾರರಿಗೆ ವರ್ಷಕ್ಕೊಮ್ಮೆ ಮಾತ್ರ ಖಾತೆ ವಿವರ ಲಭಿಸುತ್ತಿದೆ. `ಇಪಿಎಫ್‌ಒ' ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಪಿಎಫ್ ಖಾತೆ ವಿವರವನ್ನು ಮುದ್ರಿತ ರೂಪದಲ್ಲಿ ಚಂದಾದಾರರಿಗೆ ವರ್ಗಾಯಿಸುವುದು ವಾಡಿಕೆ. ಆದರೆ, ಒಮ್ಮಮ್ಮೆ ಇದು ನೌಕರರ ಕೈ ಸೇರುವುದು ವಿಳಂಬವಾಗುತ್ತದೆ. ಆದರೆ, ಇನ್ನು ಮುಂದೆ ಇದು ಆನ್‌ಲೈನ್‌ನಲ್ಲೇ ಲಭ್ಯವಾಗಲಿದೆ ಎಂದು ಜಲನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry