ಶುಕ್ರವಾರ, ಮೇ 14, 2021
35 °C

ಆನ್‌ಲೈನ್‌ನಲ್ಲಿ ಸಿ.ಇ.ಟಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಇ.ಟಿ ಪ್ರಾಕ್ಟಿಸ್ ಆನ್‌ಲೈನ್ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಆನ್‌ಲೈನ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಸದಸ್ಯ ಗಣಪತಿ ದೇವಪ್ಪ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಪ್ಪ, ಸಂಸ್ಥೆಯ ವೆಬ್‌ಸೈಟ್ www.­cetpraticeonline.in  ಗೆ ಒಮ್ಮೆ ಲಾಗ್ ಇನ್ ಆಗಿ 450 ರೂಪಾಯಿ ಸಂದಾಯ ಮಾಡಿದರೆ ಸಿಇಟಿ ಸಂಬಂಧಪಟ್ಟ ಎಲ್ಲ ಉತ್ತರಗಳು ಸಿಗಲಿದೆ ಎಂದು ತಿಳಿಸಿದರು. ನಗರ ಪ್ರದೇಶದ ವಿದ್ಯಾರ್ಥಿಗಳು ಮನೆಪಾಠದ ಅವಕಾಶವನ್ನು ಪಡೆಯುತ್ತಾರೆ.ಆದರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡುವ ಉದ್ದೇಶಕ್ಕಾಗಿ ಈ ಪ್ರಯೋಗವನ್ನು ಮಾಡಲಾಗಿದೆ ಎಂದು ಹೇಳಿದರು.ವಿವಿಧ ಹಂತದ ಪ್ರತಿ ವಿಷಯದಲ್ಲಿ 5 ಹಂತದ ಪರೀಕ್ಷೆಗಳಿದ್ದು,  ಸಮಯದ ಅಭಾವ ಉಂಟಾಗದಂತೆ  ಪ್ರಶ್ನೆಗಳನ್ನು ಅರ್ಥವಾಗುವ ರೀತಿಯಲ್ಲಿ ಅಳವಡಿಸಲಾಗಿದ್ದು, ಸಿಇಟಿ ಪರೀಕ್ಷೆಯಲ್ಲಿ  ಒತ್ತಡವನ್ನು ನಿಭಾಯಿಸುವುದಕ್ಕೆ ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.