ಆನ್‌ಲೈನ್ ಅರ್ಜಿ ಸಮಸ್ಯೆ: ತಾಂತ್ರಿಕ ತೊಂದರೆ ಕಾರಣ

7

ಆನ್‌ಲೈನ್ ಅರ್ಜಿ ಸಮಸ್ಯೆ: ತಾಂತ್ರಿಕ ತೊಂದರೆ ಕಾರಣ

Published:
Updated:

ಬೆಂಗಳೂರು: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಇದೇ 5ರಂದು (ಶನಿವಾರ) ಸಮಸ್ಯೆ ಕಂಡುಬಂದಿತ್ತು. ಸರ್ವರ್‌ನಲ್ಲಿ ಕಂಡುಬಂದ ತಾಂತ್ರಿಕ ತೊಂದರೆಯ ಕಾರಣ ಈ ಸಮಸ್ಯೆ ಎದುರಾಗಿತ್ತು ಎಂದು ಕೇಂದ್ರೀಕೃತ ದಾಖಲಾತಿ ಘಟಕ ಹೇಳಿದೆ.ತಾಂತ್ರಿಕ ಸಮಸ್ಯೆಯನ್ನು ಮಾರನೆಯ ದಿನ (ಭಾನುವಾರ) ರಾತ್ರಿ ಸರಿಪಡಿಸಲಾಗಿದೆ. ನಂತರ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಮಸ್ಯೆ ಕಂಡುಬಂದಿಲ್ಲ ಎಂದು ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರದ ಅಂತ್ಯದ ವೇಳೆ ಉಪನ್ಯಾಸಕರ ಹುದ್ದೆಗೆ 89,933 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 40,052 ಅರ್ಜಿಗಳು ಸ್ವೀಕೃತಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry