ಆನ್‌ಲೈನ್ ನೇಮಕ ಚುರುಕು

7

ಆನ್‌ಲೈನ್ ನೇಮಕ ಚುರುಕು

Published:
Updated:

 


ನವದೆಹಲಿ(ಪಿಟಿಐ): ಆನ್‌ಲೈನ್ ಮೂಲಕ ನಡೆಯುವ ನೇಮಕಾತಿ ಪ್ರಕ್ರಿಯೆ ನವೆಂಬರ್‌ನಲ್ಲಿ ಶೇ 10ರಷ್ಟು ಹೆಚ್ಚಿದೆ ಎಂದು ಉದ್ಯೋಗ ಮಾಹಿತಿ ತಾಣ `ಮಾನ್‌ಸ್ಟರ್ ಡಾಟ್ ಕಾಂ' ನಡೆಸಿದ ಸಮೀಕ್ಷೆ ಹೇಳಿದೆ.

 

ಆರ್ಥಿಕ ಚೇತರಿಕೆ ಮತ್ತು ಸರ್ಕಾರ ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳಿಂದ ದೇಶೀಯ ಉದ್ಯಮ ವಲಯದಲ್ಲಿ ವಿಶ್ವಾಸ ಮೂಡಿದೆ. ಇದು ನೇಮಕ ಪ್ರಮಾಣ ಹೆಚ್ಚಲು ಪ್ರಮುಖ ಕಾರಣ ಎಂದು ಮಾನ್‌ಸ್ಟರ್ ಡಾಟ್ ಕಾಂ ದಕ್ಷಿಣ ಏಷ್ಯಾ ವಲಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಮೋದಿ ಅಭಿಪ್ರಾಯಪಟ್ಟಿದ್ದಾರೆ. 

 

ಶಿಕ್ಷಣ, ಎಂಜಿನಿಯರಿಂಗ್, ರಿಯಲ್ ಎಸ್ಟೇಟ್, ಆರೋಗ್ಯ ಕ್ಷೇತ್ರದಲ್ಲಿ ನೇಮಕಾತಿ  ಚುರು ಕಾಗಿದೆ. ಕಲೆ, ಸೃಜನಶೀಲ ಕ್ಷೇತ್ರದ ಅಭ್ಯ ರ್ಥಿಗಳಿಗೂ ಬೇಡಿಕೆ ಹೆಚ್ಚಿದೆ. ಕೊಚ್ಚಿ ಯಲ್ಲಿ ಶೇ 35 ಮತ್ತು ಬೆಂಗಳೂರಿನಲ್ಲಿ ಶೇ 14ರಷ್ಟು ನೇಮಕ ನಡೆದಿದೆ ಎಂದು ವರದಿ ಹೇಳಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry