ಶುಕ್ರವಾರ, ಅಕ್ಟೋಬರ್ 18, 2019
27 °C

ಆನ್‌ಲೈನ್ ಬ್ರೈಲ್ ಗ್ರಂಥಾಲಯ

Published:
Updated:

ಮುಂಬೈ (ಪಿಟಿಐ): ಆನ್‌ಲೈನ್ ಬ್ರೈಲ್ ಗ್ರಂಥಾಲಯ ಹೊಂದಿರುವ ದೇಶದ ಮೊದಲ ಮಹಾನಗರವೆಂಬ ಹಿರಿಮೆಗೆ ವಾಣಿಜ್ಯ ನಗರಿ ಪಾತ್ರವಾಗಿದ್ದು, ಈ ಮೂಲಕ ದೃಷ್ಟಿಮಾಂದ್ಯರಿಗೆ ಬಹುಭಾಷೆಯ ಪುಸ್ತಕಗಳನ್ನು ಓದುವ ಅವಕಾಶ ಲಭಿಸಿದೆ.ಲೂಯಿ ಬ್ರೈಲ್ ಅವರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ದೃಷ್ಟಿಮಾಂದ್ಯ ಮತ್ತು ಅಂಗವಿಕಲರ ಸಂಸ್ಥೆಯು (ಎನ್‌ಐವಿಎಚ್) ಇಲ್ಲಿನ ಬಾಂದ್ರಾ ಉಪನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಮುಕುಲ್ ವಾಸ್ನಿಕ್ ಗ್ರಂಥಾಲಯವನ್ನು ಉದ್ಘಾಟಿಸಿದರು.

ಅಂಧರಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ~ ಎಂದು ವಾಸ್ನಿಕ್ ತಿಳಿಸಿದರು.`10 ಭಾಷೆಯ 12,000 ಪುಸ್ತಕಗಳನ್ನು ಗ್ರಂಥಾಲಯ ಹೊಂದಿದೆ. ಈ ಎಲ್ಲವನ್ನೂ ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದ್ದು, ದೃಷ್ಟಿ ಇಲ್ಲದವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ~ ಎಂದು ಎನ್‌ಐವಿಎಚ್ ನಿರ್ದೇಶಕಿ ಅನುರಾಧಾ ಮೋಹಿತ್ ಅವರು ತಿಳಿಸಿದರು.

Post Comments (+)