ಆನ್ಲೈನ್ ಮೂಲಕ ಕೌನ್ಸೆಲಿಂಗ್: ಹರ್ಷ
ಗುಲ್ಬರ್ಗ: ರಾಜ್ಯ ಸರ್ಕಾರ ಪ್ರಶಕ್ತ ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆಯನ್ನು ಕೈಬಿಟ್ಟಿರುವುದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಸರ್ಕಾರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಆನ್ಲೈನ್ ಮೂಲಕ ಪ್ರವೇಶಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಹೈ-ಕ ಜನಪರ ಸಂಘರ್ಷ ಸಮಿತಿ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಿದ್ಯಾರ್ಥಿ ಪರವಾದ ಹೋರಾಟಕ್ಕೆ ಮನ್ನಣೆ ನೀಡಿ ಬಡ ವಿದ್ಯಾರ್ಥಿಗಳಿಗೆ ಆಗುವಂತ ಅನ್ಯಾಯ ತಡೆಯಲು ಸರ್ಕಾರದ ಇಚ್ಛಾ ಶಕ್ತಿಗೆ ಸಮಿತಿ ಶ್ಲಾಘನೀಯ ಎಂದು ಹೇಳಿದರು.
ಗುಲ್ಬರ್ಗ ಸೇರಿದಂತೆ ರಾಜ್ಯದ 11 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಆನ್ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಡಿಪ್ಲೊಮಾಕ್ಕೆ ಪ್ರವೇಶ ನೀಡಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಮನೀಷ್ಜಾಜು, ಎಸ್.ಎನ್. ಮೋದಿ, ನಾಗಲಿಂಗಯ್ಯ ಮಠಪತಿ, ಮೀರಾಜುದ್ದೀನ್, ಶಾಂತಪ್ಪ ಜಿ. ಕಾರಭಾಸಗಿ, ನಿಂಗಣ್ಣ ಉದನೂರ, ಮಂಜುನಾಥ ನಾಲವಾರಕರ್, ಸುಭಾಷ ಕುಲಕರ್ಣಿ, ರಮೇಶ ರಾವೂರ್ ಮೊದಲಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.
`ದಾರಿ ತಪ್ಪಿಸುವ ಮುಖಂಡರನ್ನು ನಂಬಬೇಡಿ~
ಗುಲ್ಬರ್ಗ: ರಾಜಶ್ರೀ ಸಿಮೆಂಟ್ ಸಾಮಾನ್ಯ ಕಾರ್ಮಿಕರು ಮತ್ತು ಸಿಬ್ಬಂದಿ ಸಂಘಟನೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು)ನಲ್ಲಿ ಮಾನ್ಯತೆ ಪಡೆದಿದ್ದು, ಕೇಲವು ಪಟ್ಟ ಭದ್ರ ಹಿತಾಸಕ್ತಿಗಳು ಸಂಘಟನೆಯ ಧ್ವಜ ಹಿಡಿದು ಗುತ್ತಿಗೆ ಕಾರ್ಮಿಕರಿಗೆ ಹೆಚ್ಚಿನ ವೇತನ ಕೊಡಿಸುವ ಸುಳ್ಳು ಭರವಸೆ ನೀಡುತ್ತಿವೆ. ಅಂಥವರನ್ನು ನಂಬದೆ ನ್ಯಾಯಯುತ ಹೋರಾಟ ಮಾಡಿರುವ ಸಂಘಟನೆಗೆ ಬೆಂಬಲ ನೀಡುವಂತೆ ಸಿಐಟಿಯು ಜಿಲ್ಲಾ ಅಧ್ಯಕ್ಷೆ ಶಾಂತಾ ಘಂಟೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಮಂಜೂರಪಟೇಲ್ ಹೆಬ್ಬಳ್ಳಿ ತಿಳಿಸಿದ್ದಾರೆ.
ಕಾರ್ಮಿಕರಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ವೇತನ ಮಂಜೂರಿ ಮಾಡಿಸುವಲ್ಲಿ ಸಂಘಟನೆ ಒಕ್ಕಟಿನ ಹೋರಾಟ ನಡೆಸಿದ್ದು, ಕಾನೂನು ಪ್ರಕಾರವಾಗಿ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯ ಕಲ್ಪಿಸಿಕೊಡಲು ಹೋರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಕಾರ್ಮಿಕರಿಗೆ ಭವಿಷ್ಯ ನಿಧಿ, ರಾಜ್ಯ ಕಾರ್ಮಿಕರ ಭವಿಷ್ಯ ನಿಧಿ, ಗ್ರಾಚ್ಯುಟಿ, ವೇತನ ಸಹಿತ ರಜೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗುತ್ತಿಗೆ ಕಾರ್ಮಿಕರು 2 ಸಾವಿರದಿಂದ 11 ಸಾವಿರ ರೂಪಾಯಿವರೆಗೆ ವೇತನ ಪಡೆಯುತ್ತಿದ್ದಾರೆ.
ಚಂದ್ರಶೇಖರ ಹಿರೇಮಠ ಅನವಶ್ಯಕವಾಗಿ ಕಾರ್ಮಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇಂಥ ಯಾವುದೇ ಗೊಂದಲಗಳಿಗೆ ಒತ್ತು ನೀಡದಂತೆ ಸಿಐಟಿಯು ಮುಖಂಡರು ತಿಳಿಸಿದ್ದಾರೆ.
ಕೇಲವು ತಪ್ಪು ಮಾಹಿತಿ ನೀಡಿ ಕಾರ್ಮಿಕರನ್ನು ದಾರಿ ತಪ್ಪಿಸುವ ಯಾವುದೇ ಮುಖಂಡರನ್ನು ನಂಬದೆ ಹೋರಾಟ ಮಾಡಿರುವ ವಿಶ್ವಾಸವಿಡುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.