ಆನ್ಲೈನ್ ವಹಿವಾಟು ಹೆಚ್ಚಳ
ಮುಂಬೈ(ಪಿಟಿಐ): ನೆಲ-ಮುಗಿಲು ಒಂದಾಗುವಂತೆ ಬರುತ್ತಿರುವ ಸಾಮಾಜಿಕ ಮಾಧ್ಯಮಗಳಿಂದ ದೇಶೀಯ ಆನ್ಲೈನ್ ಮಾರುಕಟ್ಟೆ ಕಳೆದ ವರ್ಷಾಂತ್ಯದ ವೇಳೆಗೆ ರೂ. 50 ಸಾವಿರ ಕೋಟಿಯ ಗಡಿ ದಾಟಿತ್ತು ಎಂದು ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಸೇವಾ ಸಂಸ್ಥೆಗಳ ಒಕ್ಕೂಟದ ವರದಿ ತಿಳಿಸಿದೆ.
ಚೀನಾ ಮತ್ತು ಅಮೆರಿಕ ಹೊರತುಪಡಿಸಿದರೆ ಪ್ರಪಂಚದಲ್ಲಿಯೇ ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ದೇಶ ಭಾರತ. ಅಂದಾಜು 15 ಕೋಟಿ ಜನರು ಆನ್ಲೈನ್ ಸೇವೆಗಳನ್ನು ಬಳಸುತ್ತಿದ್ದು, ಇವರಲ್ಲಿ 5 ಕೋಟಿ ಮಂದಿ `ಫೇಸ್ಬುಕ್~ ಮತ್ತು 1.30 ಕೋಟಿ ಜನರು `ಟ್ವಿಟರ್~ ಖಾತೆ ಹೊಂದಿದ್ದಾರೆ.
ಮೊಬೈಲ್ ಫೋನ್ನ ಇಂಟರ್ನೆಟ್ ಮಾರುಕಟ್ಟೆಯೂ ವಿಸ್ತರಣೆಗೊಂಡಿದ್ದು, ಇದರಿಂದ `ಇ-ಉಡುಗೊರೆ~ ರವಾನೆಯೂ ಸಾಮಾನ್ಯವಾಗಿದೆ. `ಇ-ಬೇ~, `ಫ್ಲಿಪ್ಕಾರ್ಟ್~ ಸೇರಿದಂತೆ ಹಲವು ಆನ್ಲೈನ್ ತಾಣಗಳ ಮೂಲಕ ಶಾಪಿಂಗ್ ನಡೆಸುವುದೂ ಹೆಚ್ಚಿದೆ ಎನ್ನುತ್ತಾರೆ `ಐಸಿಐಸಿಐ~ ಮರ್ಚೆಂಟ್ಸ್ ಸರ್ವೀಸಸ್ ಪ್ರಧಾನ ವ್ಯವಸ್ಥಾಪಕ ಅಮರೀಶ್ ರಾಹು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.