ಆನ್ ರೋಡ್

7

ಆನ್ ರೋಡ್

Published:
Updated:

ಬಿಎಂಡಬ್ಲೂ ಮಿನಿ ಕೂಪರ್

ವಿಲಾಸಿ ಕಾರುಗಳ ತಯಾರಿಕೆಯಲ್ಲಿ ಜಗತ್‌ಪ್ರಸಿದ್ಧ ಕಂಪೆನಿ ಬಿಎಂಡಬ್ಲೂ ಮಿನಿ ಎಂಬ ಸಣ್ಣ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪುಟ್ಟದಾದ ಈ ಕಾರಿಗೆ ಎರಡು ಬಾಗಿಲುಗಳು ಹಾಗೂ ನಾಲ್ಕು ಆಸನ ವ್ಯವಸ್ಥೆಗಳ ಇದೆ. 1598 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರನ್ನು ಬಿಎಂಡಬ್ಲೂ ಮಿನಿ ಕೂಪರ್ ಹಾಗೂ ಮಿನಿ ಕೂಪರ್ ಎಸ್ ಎಂಬ ಎರಡು ಮಾದರಿಯಲ್ಲಿ ಪರಿಚಯಿಸಲಾಗಿದೆ.ಆರು ಗೇರುಗಳುಳ್ಳ ಈ ಪುಟ್ಟ ಕಾರು ಗಂಟೆಗೆ ನೂರು ಕಿ.ಮೀ ವೇಗ ಕ್ರಮಿಸಲು ತೆಗೆದುಕೊಳ್ಳುವ ಸಮಯ ಮಿನಿ ಕೂಪರ್‌ನಲ್ಲಿ (ಗರಿಷ್ಠ ವೇಗ ಪ್ರತಿ ಗಂಟೆಗೆ 197 ಕಿ.ಮೀ.)10.4 ಸೆಕೆಂಡುಗಳು ಹಾಗೂ ಮಿನಿ ಕೂಪರ್ ಎಸ್ (ಗರಿಷ್ಠ ವೇಗ ಪ್ರತಿ ಗಂಟೆಗೆ 223 ಕಿ.ಮೀ.) 7.2 ಸೆಕೆಂಡುಗಳು.1240 ಕೆ.ಜಿ ತೂಕವಿರುವ ಈ ಕಾರು ಪ್ರತಿ ಲೀ.ಗೆ 15ರಷ್ಟು ಇಂಧನ ಕ್ಷಮತೆ ನೀಡಲಿದೆ ಎಂದು ಅಂದಾಜು ಮಾಡಲಾಗಿದೆ. ಮುಂಬೈನಲ್ಲಿ (ಎಕ್ಸ್ ಶೋರೂಂ) ಬಿಎಂಡಬ್ಲೂ ಮಿನಿ ಕೂಪರ್ ರೂ. 26 ಲಕ್ಷ ಹಾಗೂ ಮಿನಿ ಕೂಪರ್ ಎಸ್ ರೂ. 29 ಲಕ್ಷ.

ಹೊಸ ಡಿಜೈರ್
ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಸ್ವಿಫ್ಟ್‌ಗೆ ಹೊಸ ರೂಪ ನೀಡಿದ ಮಾರುತಿ ಸುಜುಕಿ ಇದೀಗ ಅದೇ ರೂಪವನ್ನು ತನ್ನ ಸೆಡಾನ್ ವಿಭಾಗದ ಸ್ವಿಫ್ಟ್ ಡಿಜೈರ್‌ಗೂ ನೀಡಿದೆ. 230 ಕೋಟಿ ರೂಪಾಯಿ ವೆಚ್ಛದಲ್ಲಿ ವಿನ್ಯಾಸಗೊಂಡಿರುವ ಹೊಸ ಡಿಜೈರ್‌ನಲ್ಲಿ 150 ಹೊಸ ವಿಶೇಷಗಳಿವೆ ಎಂದು ಕಂಪೆನಿ ಹೇಳಿಕೊಂಡಿದೆ.

 

ಉದ್ದಕ್ಕೆ ಅನುಗುಣವಾಗಿ ಕಾರಿನ ವಿಸ್ತಾರವನ್ನು ಬದಲಾಯಿಸಲಾಗಿದೆ ಹಾಗೂ ಗ್ರೌಂಡ್ ಕ್ಲಿಯರೆನ್ಸ್ ಈಗ ಇನ್ನಷ್ಟು ಹೆಚ್ಚಿಸಲಾಗಿದೆ.  ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್‌ಗಳಲ್ಲಿ ಲಭ್ಯವಿರುವ ಕಾರಿನ ಇಂಧನ ಕ್ಷಮತೆಯನ್ನು ಹೆಚ್ಚಿಸಲಾಗಿದೆ.ಪೆಟ್ರೋಲ್ ಡಿಜೈರ್ ಪ್ರತಿ ಲೀಟರ್‌ಗೆ 19.1 ಕಿ. ಮೀ ಇಂಧನ ಕ್ಷಮತೆ ನೀಡುತ್ತದೆ ಡೀಸಲ್ ಎಂಜಿನ್ ಹೊಂದಿರುವ ಡಿಜೈರ್ ಪ್ರತಿ ಲೀಟರ್‌ಗೆ 23.4 ಕಿ.ಮೀ ಇಂಧನ ಕ್ಷಮತೆ ನೀಡಲಿದೆ. ಹಗುರವಾದ ಬಾಡಿ ಹಾಗೂ ಪಾಲಿಮರಿಕ್ ಇಂಧನ ಟ್ಯಾಂಕ್ ಹೊಂದಿರುವ ಡಿಜೈರ್ ಒಳಾಂಗಣ ಹಾಗೂ ಹೊರ ನೋಟವನ್ನು ಈ ಹಿಂದಿಗಿಂಥ ಸಂಪೂರ್ಣವಾಗಿ ಭಿನ್ನವಾಗಿದೆ.

 

ಮೂರು ಶ್ರೇಣಿಗಳಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಪೆಟ್ರೋಲ್ ಕಾರಿನ ಬೆಲೆ ಬೆಂಗಳೂರಿನಲ್ಲಿ (ಎಕ್ಸ್ ಶೋರೂಂ ಬೆಲೆ) 4.8ರಿಂದ 6.2 ಲಕ್ಷ ರೂಪಾಯಿ. ಡೀಸಲ್ ಕಾರಿನ ಬೆಲೆ 5.8ರಿಂದ 7.1 ಲಕ್ಷ ರೂಪಾಯಿ.ಫಿಯೆಟ್ ಪುಂತೊ ಹಾಗೂ ಲೀನಿಯಾ 2012
ಇಟಲಿಯ ಫಿಯೆಟ್ 2012ರ ಹೊಸ ಹ್ಯಾಚ್‌ಬ್ಯಾಕ್ ಶ್ರೇಣಿಯ ಪುಂತೊ ಹಾಗೂ ಸೆಡಾನ್ ಶ್ರೇಣಿಯ ಲೀನಿಯಾ ಬಿಡುಗಡೆ ಮಾಡಿದೆ. ಮಳೆ ಬಂದಾಗ ಸ್ವಯಂ ಚಾಲಿತ ವೈಫರ್ ಹಾಗೂ ಸ್ವಯಂ ಚಾಲಿತ ಹೆಡ್ ಲ್ಯಾಂಪ್ ಜತೆಗೆ ಬ್ಲೂ ಅಂಡ್ ಮಿ ಹಾಗೂ ಮೈ ಕಾರ್‌ಗಳೆಂಬ ಹೊಸ ಸೌಲಭ್ಯಗಳನ್ನು ಫಿಯೆಟ್ ಪರಿಚಯಿಸಿದೆ.

 

ಇದರೊಂದಿಗೆ ಆರಂಭಿಕ ಶ್ರೇಣಿಯ ಕಾರುಗಳಲ್ಲೇ ಮ್ಯೂಸಿಕ್ ಸಿಸ್ಟಂ ಹಾಗೂ ಸೆಂಟ್ರಲ್ ಲಾಕಿಂಗ್ ಸೌಲಭ್ಯ ನೀಡಿರುವ ಫಿಯೆಟ್ ಕಾರುಗಳ ಗ್ರೌಂಡ್ ಕ್ಲಿಯರೆನ್ಸ್ 10 ಮಿ.ಮೀನಷ್ಟು ಹೆಚ್ಚಿಸಲಾಗಿದೆ. ಲೀನಿಯಾದ ವಿಲಾಸಿ ಡೀಸಲ್ ಶ್ರೇಣಿಯ ಕಾರುಗಳಲ್ಲಿ ಲೆದರ್ ಆಸನ ಕವಚ ಹಾಗೂ 16” ಅಲಾಯ್ ವೀಲ್‌ಗಳನ್ನು ಹೊಂದಿದೆ.ಫಿಯೆಟ್ ಪುಂತೊ ಪೆಟ್ರೋಲ್ ಕಾರಿನ ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 15 ಕಿ.ಮೀಯಾಗಿದ್ದು ಇದರ ಬೆಲೆ (ದೆಹಲಿ ಎಕ್ಸ್ ಶೋ ರೂಂ) 4.8ರಿಂದ 6.5 ಲಕ್ಷ ರೂಪಾಯಿ. ಡೀಸಲ್ ಎಂಜಿನ್ ಹೊಂದಿರುವ ಪುಂತೊ ಪ್ರತಿ ಲೀಟರ್‌ಗೆ 20.3 ಕಿ.ಮೀ ಇಂಧನ ಕ್ಷಮತೆ ಹೊಂದಿದ್ದು ಇದರ ಬೆಲೆ 5.4ರಿಂದ 6.7 ಲಕ್ಷ ರೂಪಾಯಿ. ಫಿಯೆಟ್ ಲೀನಿಯಾ ಪೆಟ್ರೊಲ್ ಕಾರಿನ (1.2 ಲೀ. ಹಾಗೂ 1.4 ಫೈರ್)ನ ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 14.2 ಕಿ.ಮೀ ಆಗಿದ್ದು ಇದರ ಬೆಲೆ (ದೆಹಲಿ ಎಕ್ಸ್ ಶೋ ರೂಂ) 6.8ರಿಂದ 7.8 ಲಕ್ಷ ರೂಪಾಯಿ ಹಾಗೂ ಡೀಸಲ್ (1.3 ಲೀ ಅಡ್ವಾನ್ಸ್ಡ್ ಮಲ್ಟಿಜೆಟ್) 20.4 ಕಿ.ಮೀ ಇಂಧನ ಕ್ಷಮತೆ ಹೊಂದಿದ್ದು ಇದರ ಬೆಲೆ (ದೆಹಲಿ ಎಕ್ಸ್ ಶೋ ರೂಂ) 7.8ರಿಂದ 9.1 ಲಕ್ಷ ರೂಪಾಯಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry