ಶುಕ್ರವಾರ, ನವೆಂಬರ್ 15, 2019
20 °C

ಆಫ್ಘನ್‌ನಲ್ಲಿ ಏಂಜಲಿನಾ ಶಾಲೆ

Published:
Updated:

ಲಾಸ್ ಏಂಜಲೀಸ್(ಪಿಟಿಐ): ಯುದ್ಧಪೀಡಿತ ಆಘ್ಘಾನಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿವಹಿಸಿರುವ ಖ್ಯಾತ ಹಾಲಿವುಡ್ ನಟಿ ಏಂಜಲಿನಾ ಜೋಲಿ, ಅಲ್ಲಿ ಶಾಲೆ ತೆರೆಯಲು ಮುಂದಾಗಿದ್ದಾರೆ. ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿಸುವ ದೃಷ್ಟಿಯಿಂದ ಜೋಲಿ ಅವರು, ತಮ್ಮ ಪ್ರತಿಷ್ಠಾನದ ಮೂಲಕ ಶಾಲೆಗಳನ್ನು ತೆರೆಯಲು ಮುಂದಾಗಿದ್ದಾರೆ. ಕಾಬೂಲ್‌ನ ಹೊರವಲಯದ ಸುಮಾರು 200ರಿಂದ 300 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಪ್ರತಿಕ್ರಿಯಿಸಿ (+)