ಆಫ್ಘನ್ ಬಸ್ ಅಪಘಾತ: 35 ಸಾವು

7

ಆಫ್ಘನ್ ಬಸ್ ಅಪಘಾತ: 35 ಸಾವು

Published:
Updated:
ಆಫ್ಘನ್ ಬಸ್ ಅಪಘಾತ: 35 ಸಾವು

ಕಾಬೂಲ್ (ಐಎಎನ್‌ಎಸ್):  ಬಸ್ಸೊಂದು ಘಟ್ಟ ಪ್ರದೇಶದಲ್ಲಿ ಮುಗುಚಿಬಿದ್ದ ಪರಿಣಾಮ 35 ಪ್ರಯಾಣಿಕರು ಮೃತಪಟ್ಟು, ಇತರ 27 ಮಂದಿ ಗಾಯಗೊಂಡ ಘಟನೆ ಆಘ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ ಶನಿವಾರ ಸಂಭವಿಸಿದೆ.ಕಂದಹಾರ್ ಪ್ರಾಂತ್ಯದ ಘಟ್ಟ ಪ್ರದೇಶದಲ್ಲಿ ಬಸ್ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಹಲವು ಬಾರಿ ಪಲ್ಟಿ ಹೊಡೆಯಿತು. `ರಸ್ತೆ ತುಂಬಾ ಹಾಳಾಗಿರುವುದೇ ಅಪಘಾತಕ್ಕೆ ಕಾರಣ~ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿರುವ ಕಂದಹಾರ್ ಪ್ರಾಂತ್ಯದ ಸರ್ಕಾರಿ ವಕ್ತಾರ ಜಲಮೈ ಅಯುಬಿ, `ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ~ ಎಂದೂ ಹೇಳಿದ್ದಾರೆ.

ಸ್ಫೋಟಕ್ಕೆ ಐವರು ಬಲಿ

ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಗೆ ಸುಮಾರು ಐವರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾನ್‌ಘರ್‌ನಲ್ಲಿ ಉಗ್ರರು ಆಟೊದಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದು ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry