ಆಫ್ಘನ್: ಬಾಂಬ್ ಸ್ಪೋಟ 9 ಸಾವು

7

ಆಫ್ಘನ್: ಬಾಂಬ್ ಸ್ಪೋಟ 9 ಸಾವು

Published:
Updated:

ಕಾಬೂಲ್ (ಡಿಪಿಎ): ರಸ್ತೆ ಬದಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಮಕ್ಕಳು ಮತ್ತು ಮಹಿಳೆಯರೂ ಸೇರಿದಂತೆ  ಒಟ್ಟು 9 ಮಂದಿ ನಾಗರೀಕರು ಬಲಿಯಾದ ಘಟನೆ ಪೂರ್ವ ಆಫ್ಘಾನಿಸ್ತಾನದಲ್ಲಿ ಶನಿವಾರ ನಡೆದಿದೆ.ಖೊಸ್ಟ್ ಪ್ರಾಂತ್ಯದಲ್ಲಿರುವ ಕುಗ್ರಾಮ ಲಕಾನ್‌ನಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ನಾಲ್ಕು ಮಕ್ಕಳು,ಮೂವರು ಪುರುಷರು ಮತ್ತು ಇಬ್ಬರೂ ಮಹಿಳೆಯರು  ಮೃತಪಟ್ಟಿದ್ದಾರೆ. ವಾರದ ಹಿಂದೆ ಇದೇ ಪ್ರಾಂತ್ಯದಲ್ಲಿ ನಡೆದ ಮಾನವ ಹತ್ಯಾ ಬಾಂಬ್ ಸ್ಫೋಟದಲ್ಲಿ ಒಬ್ಬ ಪೊಲೀಸ್ ಮತ್ತು 7 ಮಂದಿ ನಾಗರೀಕರು ಹತರಾಗಿದ್ದರು.ದೇಶದಾದ್ಯಂತ ವಿದೇಶಿ ಸೈನಿಕರ ಮತ್ತು ತಾಲಿಬಾನ್ ಉಗ್ರರ ಚಟುವಟಿಕೆಗಳು  ಹೆಚ್ಚಿದ್ದರಿಂದ ಹಿಂಸಾಕೃತ್ಯಗಳು  ಪದೇಪದೇ ನಡೆಯತೊಡಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry